ಅಕ್ಟೋಬರ್ ಒಂದರಿಂದ ಇಡೀ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ಹಾಗೂ ಬ್ಯಾಂಕ್ನಲ್ಲಿ ಅಕೌಂಟ್ ಇದ್ದವರಿಗೆ ಆರು ಹೊಸ ರೂಲ್ಸ್ಗಳು ಅನ್ವಯವಾಗುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಎಲ್ಲಾ ಬ್ಯಾಂಕ್ಗಳಲ್ಲಿ ಅಕೌಂಟ್ ಇರುವ ಎಲ್ಲಾ ಗ್ರಾಹಕರಿಗೂ ಅನ್ವಯಿಸುವಂತೆ ಆರು ಹೊಸ ರೂಲ್ಸ್ ಗಳು ಇದೇ ಅಕ್ಟೋಬರ್ ನಿಂದ ಜಾರಿಗೆ ಬಂದಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್ 1, 2025 ರಿಂದ ಹೊಸ ಉಳಿತಾಯ ಖಾತೆ ನಿಯಮಗಳನ್ನ ಜಾರಿಗೆ ತರಲಿದೆ. ಈ ಬದಲಾವಣೆಗಳು ದೇಶಾದ್ಯಂತ ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿವೆ. ಕನಿಷ್ಠ ಬ್ಯಾಲೆನ್ಸ್, ಎಟಿಎಂ ಯುಪಿಐ ವಹಿವಾಟುಗಳು, ಚೆಕ್ ಬುಕ್ ಸೌಲಭ್ಯಗಳು, ಎಸ್ಎಂಎಸ್ ಎಚ್ಚರಿಕೆಗಳು, ಖಾತೆ ಮುಚ್ಚುವಿಕೆ ಶುಲ್ಕಗಳು ಎಲ್ಲವೂ ಈ ನಿಯಮಗಳ ಭಾಗವಾಗಿದೆ.
ಹೊಸ ಕನಿಷ್ಠ ಬ್ಯಾಲೆನ್ಸ್ ನಿಯಮಗಳು : ಇಲ್ಲಿಯವರೆಗೆ ಬ್ಯಾಂಕುಗಳು ತಮ್ಮ ಆಯ್ಕೆಯ ಪ್ರಕಾರ ಕನಿಷ್ಠ ಬ್ಯಾಲೆನ್ಸ್ ಹೊಂದಿಸುತ್ತಿದ್ದವು. ಆದರೆ ಅಕ್ಟೋಬರ್ ಒಂದರಿಂದ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರು ಕನಿಷ್ಠ 5000 ರೂಪಾಯಿಗಳ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ. ಅರೆನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಿತಿಯನ್ನ 2000 ರೂಪಾಯಿಗಳಿಗೆ ನಿಗದಿ ಪಡಿಸಲಾಗಿದೆ. ಈ ಏಕರೂಪದ ನಿಯಮಗಳು ಗ್ರಾಹಕರಲ್ಲಿ ಗೊಂದಲವನ್ನ ಕಡಿಮೆ ಮಾಡುತ್ತವೆ.
ಹೊಸ ಎಟಿಎಂ ಶರತ್ತುಗಳು : ಇಲ್ಲಿಯವರೆಗೆ ಹೆಚ್ಚಿನ ಬ್ಯಾಂಕುಗಳು ತಿಂಗಳಿಗೆ ಐದು ಉಚಿತ ಹಿಂಪಡೆಯುವಿಕೆಗಳನ್ನ ನೀಡುತ್ತಿದ್ದವು. ಈಗ ಮೆಟ್ರೋ ಪ್ರದೇಶಗಳಲ್ಲಿನ ಗ್ರಾಹಕರು ತಿಂಗಳಿಗೆ ಮೂರು ಬಾರಿ ಮಾತ್ರ ಉಚಿತವಾಗಿ ಹಣವನ್ನ ಹಿಂಪಡೆಯಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಐದು ಉಚಿತ ನಗದು ಹಿಂಪಡೆಯುವಿಕೆಗಳು ಮುಂದುವರೆಯುತ್ತವೆ. ಹೆಚ್ಚುವರಿಯಾಗಿ ಪ್ರತಿ ವಹಿವಾಟಿಗೆ 18 ರೂಪಾಯಿ ವಿಧಿಸಲಾಗುತ್ತದೆ.
ಯುಪಿಐ ವಹಿವಾಟು ಮಿತಿಗಳು : ಯುಪಿಐ ಇನ್ನು ಉಚಿತವಾಗಿಯೇ ಇರುತ್ತದೆ. ಆದರೆ ಹೊಸ ನಿಯಮದ ಪ್ರಕಾರ ಒಬ್ಬ ಗ್ರಾಹಕರು ದಿನಕ್ಕೆ ಗರಿಷ್ಠ 30 ವಹಿವಾಟುಗಳನ್ನು ಮಾತ್ರ ಮಾಡಬಹುದು. ವ್ಯವಸ್ಥೆಯ ಮೇಲಿನ ಒತ್ತಡವನ್ನ ಕಡಿಮೆ ಮಾಡುವುದು ಮತ್ತು ಭದ್ರತೆಯನ್ನ ಸುಧಾರಿಸುವುದು ಇದರ ಹಿಂದಿನ ಉದ್ದೇಶ.
ಚೆಕ್ ಬುಕ್ ಸೌಲಭ್ಯ : ಇಲ್ಲಿಯವರೆಗೆ ಹೆಚ್ಚಿನ ಬ್ಯಾಂಕುಗಳು ಕೇವಲ 10 ಚೆಕ್ ಉಚಿತವಾಗಿ ನೀಡುತ್ತಿದ್ದವು. ಈಗ ಗ್ರಾಹಕರು 20 ಉಚಿತ ಚೆಕ್ ಪಡೆಯುತ್ತಾರೆ. ಹೆಚ್ಚುವರಿ ಚೆಕ್ ಎಲೆಗಳಿಗೆ ತಲ ಕೇವಲ ಮೂರು ರೂಪಾಯಿ ವೆಚ್ಚವಾಗುತ್ತದೆ.
ಎಸ್ಎಂಎಸ್ ಇಮೇಲ್ ಎಚ್ಚರಿಕೆಗಳು : ಡಿಜಿಟಲ್ ವಹಿವಾಟುಗಳ ಕುರಿತು ಉಚಿತ ಎಸ್ಎಂಎಸ್ ಮತ್ತು ಇಮೇಲ್ ಎಚ್ಚರಿಕೆಗಳು ಎಲ್ಲಾ ಗ್ರಾಹಕರಿಗೆ ಕಡ್ಡಾಯವಾಗಿರುತ್ತವೆ. ಇಲ್ಲಿಯವರೆಗೆ ಕೆಲವು ಬ್ಯಾಂಕುಗಳು ಒಂದು ನಿರ್ದಿಷ್ಟ ಮಿತಿಯವರೆಗೆ ಮಾತ್ರ ಡಿಜಿಟಲ್ ವಹಿವಾಟುಗಳ ಕುರಿತು ಉಚಿತ ಎಸ್ಎಂಎಸ್ ಮತ್ತು ಇಮೇಲ್ ಎಚ್ಚರಿಕೆಗಳನ್ನ ಒದಗಿಸುತ್ತಿದ್ದವು. ಈಗ ಪ್ರತಿ ವಹಿವಾಟಿಗೆ ನೇರವಾಗಿ ಉಚಿತ ಎಚ್ಚರಿಕೆ ಸಿಗುತ್ತದೆ. ವಂಚನೆಯನ್ನ ಕಡಿಮೆ ಮಾಡುವಲ್ಲಿ ಇದು ದೊಡ್ಡ ಸಹಾಯವಾಗುತ್ತದೆ.
ಖಾತೆ ಮುಚ್ಚುವ ನಿಯಮಗಳು : ಇಲ್ಲಿಯವರೆಗೆ ಖಾತೆ ಮುಚ್ಚುವಿಕೆಗೆ ಬ್ಯಾಂಕುಗಳು ಹೆಚ್ಚಿನ ಶುಲ್ಕವನ್ನ ವಿಧಿಸುತ್ತಿದ್ದವು. ಈಗ ಖಾತೆ ತೆರೆದ 14 ದಿನಗಳಲ್ಲಿ ಖಾತೆಯನ್ನ ಮುಚ್ಚಿದರೆ ಯಾವುದೇ ಶುಲ್ಕವಿರುವುದಿಲ್ಲ. ಅದರ ನಂತರ ಅದನ್ನ ಮುಚ್ಚುವವರು ಶುಲ್ಕವನ್ನ ಪಾವತಿಸಬೇಕಾಗುತ್ತದೆ. 250 ರೂಪಾಯಿ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ.

ಬ್ಯಾಂಕ್ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್ – 6 ಹೊಸ ರೂಲ್ಸ್ ಗಳು ಜಾರಿ – RBI New Rules for All Account Holders
WhatsApp Group
Join Now