ಮೊಬೈಲ್ ಖರೀದಿ ಮಾಡುವ ಪ್ರತಿಯೊಬ್ಬರಿಗೂ ಕೂಡ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನ ಜಾರಿಗೆ ತಂದಿದೆ. ಸಾಮಾನ್ಯವಾಗಿ ಮೊಬೈಲ್ ಖರೀದಿ ಮಾಡುವವರು ಈಗ ಇಎಂಐ ಮೂಲಕ ಮೊಬೈಲ್ ಖರೀದಿಯನ್ನ ಮಾಡ್ತಾರೆ. ಆದರೆ ಈಗ ಇಎಂಐ ಮೂಲಕ ಮೊಬೈಲ್ ಖರೀದಿ ಮಾಡುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಘಾತಕಾರಿ ಸುದ್ದಿಯನ್ನು ಕೊಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗ ತಿಂಗಳ ಇಎಂಐ ಮೂಲಕ ಮೊಬೈಲ್ ಖರೀದಿ ಮಾಡುವವರಿಗೆ ಹೊಸ ನಿಯಮವನ್ನ ದೇಶಾದ್ಯಂತ ಜಾರಿಗೆ ತಂದಿದೆ.
ಕೆಲವರು ಇಎಂಐ ಮೂಲಕ ಮೊಬೈಲ್ ಖರೀದಿ ಮಾಡ್ತಾರೆ. ಆದರೆ ಕೆಲವು ತಿಂಗಳು ಇಎಂಐ ಕಟ್ಟುವುದನ್ನ ತಪ್ಪಿಸುತ್ತಾರೆ. ಪ್ರತಿ ತಿಂಗಳು ಇಎಂಐ ಕಟ್ಟದವರಿಗಾಗಿ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಿನ ಹೊಸ ನಿಯಮವನ್ನ ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಯಾರು ಪ್ರತಿ ತಿಂಗಳು ಮೊಬೈಲ್ ಇಎಂಐ ಕಟ್ಟುವುದಿಲ್ಲವೋ ಅವರ ಮೊಬೈಲ್ಗಳನ್ನ ಬ್ಲಾಕ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಮಾಸಿಕ ಕಂತುಗಳನ್ನ ಅಂದರೆ ತಿಂಗಳ ಇಎಂಐ ಗಳನ್ನ ದೀರ್ಘಕಾಲದವರೆಗೆ ಬಾಕಿ ಉಳಿಸಿಕೊಂಡರೆ ಕಾರುಗಳನ್ನ ಹೇಗೆ ಕಂಪನಿಗಳು ಜಪ್ತಿ ಮಾಡುತ್ತದೆಯೋ ಇನ್ನು ಮುಂದೆ ಮೊಬೈಲ್ಗಳನ್ನ ಕೂಡ ಜಪ್ತಿ ಮಾಡಲಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈಗ ಮೊಬೈಲ್ ಇಎಂಐ ಗೆ ಸಂಬಂಧಪಟ್ಟಂತೆ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತರಲು ಮುಂದಾಗಿದೆ. ಜನವರಿ 1, 2026 ರಿಂದ ದೇಶಾದ್ಯಂತ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಯಾವುದೇ ಮೊಬೈಲ್ ಫೋನ್ಗಳನ್ನ ಜಪ್ತಿ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರಣಗಳಿಂದ ಮೊಬೈಲ್ ಫೋನ್ಗಳನ್ನ ಲಾಕ್ ಮಾಡಲು ಈಗ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶವನ್ನ ಹೊರಡಿಸಲು ಮುಂದಾಗಿದೆ. ಒಂದು ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ಈ ಆದೇಶವನ್ನು ಹೊರಡಿಸಿದರೆ ಇಎಂಐ ಪಾವತಿ ಮಾಡಿದ ಎಲ್ಲಾ ಮೊಬೈಲ್ಗಳು ಲಾಕ್ ಆಗಲಿದೆಯಂತೆ.