ಸಾಲ ಕಟ್ಟುತ್ತಿದ್ದವರಿಗೆ ಬೆಳ್ಳಂಬೆಳಿಗ್ಗೆ ದೊಡ್ಡ ಸಿಹಿಸುದ್ದಿ | RBI Repo Rate Neutral

Spread the love

ಗೃಹ, ವಾಹನ ಹಾಗೂ ವೈಯುಕ್ತಿಕ ಸಾಲಗಳ ಮೇಲಿನ ಬಡ್ಡಿ ಪಾವತಿಸುವ ಕೋಟ್ಯಂತರ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ರಿಲೀಫ್ ನೀಡಿದೆ. ಹಣಕಾಸು ನೀತಿ ಸಮಿತಿ ಅಂದರೆ ಎನ್ಪಿಸಿ ಸಭೆಯ ನಂತರ ರೆಫೋ ದರವನ್ನ ಯಾವುದೇ ಬದಲಾವಣೆ ಇಲ್ಲದೆ ಇದೀಗ 5.5% 5% ನಲ್ಲಿಗೆ ಮುಂದುವರೆಸಲು ನಿರ್ಧಾರ ಮಾಡಲಾಗಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಅವರು ಪ್ರಕಟಣೆ ಮಾಡಿದ್ದಾರೆ.

WhatsApp Group Join Now

ರೆಪೋ ದರ ಸ್ಥಿರವಾಗಿ ಮುಂದುವರೆಯುವುದರಿಂದ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರಗಳನ್ನು ತಕ್ಷಣಕ್ಕೆ ಹೆಚ್ಚಿಸುವ ಸಾಧ್ಯತೆಗಳು ಕೂಡ ಕಡಿಮೆಯಾಗಲಿದೆ. ಇನ್ನು ಸಾಲಗಾರರಿಗೆ ತಮ್ಮ ಇಎಂಐ ಹೊರೆಯಲ್ಲಿ ಹೆಚ್ಚಿನ ಬದಲಾವಣೆಗಳು ಕೂಡ ಆಗುವುದಿಲ್ಲ. ಅದೇ ರೀತಿ ಪ್ರಮುಖ ದರಗಳು ಹೀಗಿದ್ದು, ರೆಪೋ ದರ ಯಥಾಸ್ಥಿತಿ 5.5% ನಲ್ಲಿದ್ದು, ಎಸ್ಡಿಎಫ್ ದರ 5.25% ನಲ್ಲಿ ಮುಂದುವರಿಕೆ ಆಗಲಿದೆ. ಇನ್ನು ಎಂಎಸ್ಎಫ್ ದರ ಮತ್ತು ಬ್ಯಾಂಕ್ ದರ 5.75ರಲ್ಲಿ ಮುಂದುವರಿಕೆ ಆಗಲಿದೆ. ಈ ನಿರ್ಧಾರಕ್ಕೆ ಮುಖ್ಯ ಕಾರಣವೆಂನಂದ್ರೆ ದೇಶದಲ್ಲಿ ಹಣದುಬ್ಬರದ ದರದಲ್ಲಿ ಆಗಿರುವಂತಹ ಗಣನೀಯ ಇಳಿಕೆ ಆಗಿದೆ.

ಈ ವರ್ಷದ ಸರಾಸರಿ ಹಣದುಬ್ಬರವನ್ನ ಈ ಹಿಂದೆ ಅಂದಾಜು ಮಾಡಿದ ಶೇಕಡಾ 3.7 ಮತ್ತು ಶೇಕಡಾ 3.1 ರಿಂದ ಈಗ ಶೇಕಡಾ 2.6 ಕ್ಕೆ ಪರಿಷ್ಕರಣೆ ಮಾಡಲಾಗಿದೆ. ಇನ್ನು ಚಾಲ್ತಿಯಲ್ಲಿ ಇರುವಂತ ಜಾಗತಿಕ ಅನಿಶ್ಚಿತತೆ ಮತ್ತು ವ್ಯಾಪಾರ ಸಂಬಂಧಿತ ಬೆಳವಣಿಗೆಗಳ ಹೊರತಾಗಿ ಪ್ರಸ್ತುತ ಇರುವಂತಹ ಆರ್ಥಿಕ ಪರಿಸ್ಥಿತಿಗಳು ಮತ್ತೆ ದೇಶದ ಬೆಳವಣಿಗೆ ಮತ್ತಷ್ಟು ಬೆಂಬಲ ನೀಡಲು ಈ ನೀತಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಗವರ್ನರ್ ಸಂಜಯ್ ಮಲ್ಹೋತ್ರ ಅವರು ತಿಳಿಸಿದ್ದಾರೆ.

WhatsApp Group Join Now

Spread the love

Leave a Reply