ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವಂತಹ ಬಹುನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಜಾತಿಗಣತಿಯ ಮುಂದುವರಿಕೆಗೆ ಈಗಾಗಲೇ ಕರ್ನಾಟಕ ಹೈಕೋರ್ಟ್ ಅನುಮತಿಯನ್ನ ನೀಡಿದೆ. ಆದರೆ ಜಾತಿ ಸಮೀಕ್ಷೆಗೆ ಬಂದವರು ಈ ವಿಚಾರಗಳನ್ನ ಕೇಳುವಂತಿಲ್ಲ ಎಂದು ಹೊಸ ರೂಲ್ಸ್ ಜಾರಿ ಮಾಡಿದೆ. ಸಮೀಕ್ಷೆಗೆ ಒಪ್ಪಿಗೆ ನೀಡಿದಂತಹ ನ್ಯಾಯಾಲಯವು, ಆಯೋಗಕ್ಕೆ ಕಠಿಣ ಶರತ್ತುಗಳನ್ನು ವಿಧಿಸಿದೆ.
ಗೌಪ್ಯತೆಯ ಕಡ್ಡಾಯ :- ಸಮೀಕ್ಷೆಯ ಮೂಲಕ ಸಂಗ್ರಹಿಸಲಾದ ಯಾವುದೇ ದತ್ತಾಂಶವನ್ನ ಅಂದ್ರೆ ಯಾವುದೇ ಮಾಹಿತಿಯನ್ನ ರಾಜ್ಯ ಸರ್ಕಾರ ಸೇರಿದಂತೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಬಹಿರಂಗ ಪಡಿಸಬಾರದು ಎಂದು ಹೇಳಿದೆ. ಹಿಂದುಳಿದ ವರ್ಗಗಳ ಆಯೋಗವು ಈ ದತ್ತಾಂಶವನ್ನ ಸಂಪೂರ್ಣವಾಗಿ ಸುರಕ್ಷಿತವಾಗಿ ಮತ್ತು ಗೌಪ್ಯವಾಗಿಡಬೇಕು.
ಸ್ವಯಂ ಪ್ರೇರಿತ ಭಾಗವಹಿಸುವಿಕೆ :- ಸಮೀಕ್ಷೆಯಲ್ಲಿ ಭಾಗವಹಿಸುವುದು ಹಾಗು ಮಾಹಿತಿ ನೀಡುವುದು ಒಂದು ವಾಲೆಂಟರಿ ಕಾರ್ಯಕ್ರಮ ಆಗಿದ್ದು, ಯಾವುದೇ ನಾಗರಿಕರಿಗೆ ಮಾಹಿತಿ ನೀಡಲು ಯಾವುದೇ ರೀತಿಯ ಒತ್ತಾಯವಿಲ್ಲ ಎಂದು ಆಯೋಗವು ಸಾರ್ವಜನಿಕ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಬೇಕು ಎಂದು ತಿಳಿಸಿದೆ.
ಒತ್ತಡವನ್ನ ಹೇರುವಂತಿಲ್ಲ :- ಮಾಹಿತಿ ನೀಡುವಂತೆ ಸಮೀಕ್ಷಕರು ಸಾರ್ವಜನಿಕರ ಮೇಲೆ ಯಾವುದೇ ಒತ್ತಡವನ್ನ ಹೇರಬಾರದು. ಅಂದ್ರೆ ಮನವೊಲಿಸಲು ಪ್ರಯತ್ನ ಮಾಡಬಾರದು. ಭಾಗವಹಿಸಲು ನಿರಾಕರಿಸುವವರನ್ನು ಮುಂದೆ ಯಾವುದೇ ಪ್ರಶ್ನೆಗಳನ್ನು ಕೇಳದೇ ಅವರನ್ನು ಬಿಟ್ಟುಬಿಡಬೇಕು ಎಂದು ಸೂಚನೆಯನ್ನ ನೀಡಿದೆ.
ಅದೇ ರೀತಿ ಗೌಪ್ಯತೆ ಪ್ರಮಾಣಪತ್ರವನ್ನ ನೀಡಬೇಕು :- ದತ್ತಾಂಶ ಸಂಗ್ರಹಣೆ ಮತ್ತು ಸಂಗ್ರಹಿಸಿದ ಸಂಪೂರ್ಣ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳ ಕುರಿತು ಆಯೋಗವು ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನ ಸಲ್ಲಿಸಬೇಕು ಎಂದು ಈ ನಿಯಮವನ್ನ ಹೊರಡಿಸಿದೆ.