Senior Citizens Pension Scheme : 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಈಗ ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಪಿಂಚಣೆಯನ್ನ ಪಡೆದುಕೊಳ್ಳಬಹುದು. ದೇಶದ ವೃದ್ಧ ಹಿರಿಯ ನಾಗರಿಕರ ಜೀವನವನ್ನ ಆರ್ಥಿಕವಾಗಿ ಸುರಕ್ಷಿತ ಮತ್ತು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ ಹೊಸ ಯೋಜನೆಯನ್ನ ದೇಶಾದ್ಯಂತ ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರು ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಪಿಂಚಣಿಯನ್ನ ಪಡೆದುಕೊಳ್ಳಬಹುದು.
ಹಾಗಾದರೆ 60 ವರ್ಷ ಮೇಲ್ಪಟ್ಟವರಿಗೆ 10 ಸಾವಿರ ರೂಪಾಯಿ ಪಿಂಚಣಿ ಸಿಗುವ ಈ ಹೊಸ ಯೋಜನೆ ಯಾವುದು.? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಬೇಕಾಗಿರುವ ದಾಖಲೆಗಳು ಏನು.? ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2025ರ ಯೂನಿಫೈಡ್ ಪಿಂಚಣಿ ಯೋಜನೆಗೆ ಅರ್ಹತೆಯನ್ನ ಪಡೆದುಕೊಂಡಿರುವ ಹಿರಿಯ ನಾಗರಿಕರು ಇನ್ನು ಇನ್ನು ಮುಂದೆ 10 ಸಾವಿರ ರೂಪಾಯಿಯವರೆಗೆ ಪಿಂಚಣಿಯನ್ನ ಪಡೆದುಕೊಳ್ಳಬಹುದು.
2025ರ ಯೂನಿಫೈಡ್ ಪಿಂಚಣಿ ಯೋಜನೆಯ ಅರ್ಹತಾ ಮಾನದಂಡಗಳು ಈ ರೀತಿ ಇದೆ :-
- ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 60 ವರ್ಷವಾಗಿರಬೇಕು.
- ಭಾರತೀಯ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಬದಲಾಗಿ ಎನ್ಆರ್ಐಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
- ಅರ್ಜಿ ಸಲ್ಲಿಸುವ ವ್ಯಕ್ತಿಯ ಕುಟುಂಬದ ವಾರ್ಷಿಕ ಆದಾಯವು 50 ಸಾವಿರಕ್ಕಿಂತ ಕಡಿಮೆ ಇರಬೇಕು. ಅಷ್ಟೇ ಮಾತ್ರವಲ್ಲದೆ ಕುಟುಂಬದ ಒಟ್ಟು ಆಸ್ತಿಯು 10 ಲಕ್ಷಕ್ಕಿಂತ ಹೆಚ್ಚಿರಬಾರದು.
- ಕೇಂದ್ರ ಸರ್ಕಾರದ ಯಾವುದೇ ಪಿಂಚಣಿ ಯೋಜನೆ ಅಡಿಯಲ್ಲಿ ಪಿಂಚಣಿಯನ್ನ ಪಡೆದುಕೊಳ್ಳದೇ ಇರುವವರು ಮಾತ್ರ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು.
ಕೇಂದ್ರ ಸರ್ಕಾರದ ಯೂನಿಫೈಡ್ ಪಿಂಚಣಿ ಯೋಜನೆಗೆ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವವರು ತಮ್ಮ ಸ್ಥಳೀಯ ಪಿಂಚಣಿ ಕಾರ್ಯಾಲಯ ಅಥವಾ ಸೇವಾ ಕೇಂದ್ರವನ್ನ ಸಂಪರ್ಕ ಮಾಡಿ. ಭೌತಿಕ ಅರ್ಜಿ ಫಾರ್ಮ್ ಅನ್ನ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಕಾರ್ಡ್, ವಯಸ್ಸಿನ ಪುರಾವೆ, ವಿಳಾಸದ ಪುರಾವೆ, ಆದಾಯ ಪ್ರಮಾಣಪತ್ರ ಮತ್ತು ಬ್ಯಾಂಕ್ ದಾಖಲೆಯನ್ನ ಕಡ್ಡಾಯವಾಗಿ ಕೊಡಬೇಕು.
ಒಬ್ಬ ವ್ಯಕ್ತಿ ಅರ್ಜಿಯನ್ನು ಸಲ್ಲಿಸಿ ದಾಖಲೆಗಳನ್ನ ಸಲ್ಲಿಸಿದ ನಂತರ ಅವರ ಅರ್ಜಿಯನ್ನ ಎರಡು ವಾರಗಳಲ್ಲಿ ಪರೀಕ್ಷೆ ಮಾಡಲಾಗುತ್ತೆ. ನಿಮ್ಮ ಅರ್ಜಿಗೆ ಅನುಮೋದನೆ ಸಿಕ್ಕರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನ ವರ್ಗಾವಣೆ ಮಾಡಲಾಗುತ್ತೆ. ಈ ಯೂನಿಫೈಡ್ ಪಿಂಚಣಿ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 10 ಸಾವಿರ ರೂಪಾಯ ಪಿಂಚಣಿ ಹಣವನ್ನ ವರ್ಗಾವಣೆ ಮಾಡಲಾಗುತ್ತೆ. ಅಷ್ಟೇ ಮಾತ್ರವಲ್ಲದೆ ಪ್ರತಿ ಎರಡು ವರ್ಷಗಳಿಗೊಮ್ಮೆ ಪಿಂಚಣಿ ಮೊತ್ತವನ್ನ ಶೇಕಡ 5% ಹೆಚ್ಚಳ ಮಾಡಲಾಗುತ್ತೆ.