ದೇಶಾದ್ಯಂತ ಸಹಕಾರಿ ಬ್ಯಾಂಕ್ ಗಳಲ್ಲಿ ಹಣ ಇಟ್ಟವರಿಗೆ RBI ಹೊಸ ರೂಲ್ಸ್ | ಹಣ ಹೇಗೆ ಮರಳಿ ಪಡೆಯುವುದು.?

Spread the love

ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಸಹಕಾರಿ ಬ್ಯಾಂಕುಗಳ ಪರಾವನಿಗೆಯನ್ನ ರದ್ದುಗೊಳಿಸಿ ಮಹತ್ವದ ಘೋಷಣೆ ಮಾಡಿದೆ. ಈ ಕ್ರಮಕ್ಕೆ ಮುಖ್ಯ ಕಾರಣ ಏನಂದ್ರೆ ಬ್ಯಾಂಕುಗಳ ಕಳಪೆಯಾದ ಆರ್ಥಿಕ ಸ್ಥಿತಿ. ಅದೇ ರೀತಿ ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಕೂಡ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ನಮ್ಮ ಹಣ ಮುಳುಗುತ್ತದೆ ಎನ್ನುವ ಪ್ರಶ್ನೆಗೆ ಇದೀಗ ಆರ್ ಬಿಐ ಕೂಡ ಸ್ಪಷ್ಟನೆ ನೀಡಿದೆ.

WhatsApp Group Join Now

ಇದು ಅತ್ಯಂತ ಮತ್ತು ಪ್ರಮುಖ ಗ್ರಾಹಕರಲ್ಲಿ ಆತಂಕ ಮೂಡಿಸಿರುವಂತ ಒಂದು ಪ್ರಶ್ನೆ. ಆರ್ ಬಿಐ ಕೂಡ ಇದಕ್ಕೆ ಸ್ಪಷ್ಟನೆ ನೀಡಿವೆ. ಒಂದು ವೇಳೆ ಪರಾವನಿಗೆ ರದ್ದುಗೊಂಡ ಬ್ಯಾಂಕುಗಳು ಇನ್ಮುಂದೆ ಸೇವೆಗಳನ್ನು ನೀಡಲು ಮಾತ್ರ ಸಾಧ್ಯವಿಲ್ಲ. ಆದರೆ ಗ್ರಾಹಕರ ಹಣ ಮಾತ್ರ ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ ಎಂದಲ್ಲ ಎಂದು ಆರ್ಬಿಐ ಸ್ಪಷ್ಟನೆ ನೀಡಿದೆ.

ಭಾರತದಲ್ಲಿ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಅಂದರೆ, ಡಿಐಸಿಜಿಸಿ. ಈ ಸಂಸ್ಥೆಯಿಂದ ಗ್ರಾಹಕರ ಠೇವಣಿಗಳಿಗೆ ಸುರಕ್ಷತೆಯನ್ನ ನೀಡುತ್ತದೆ. ಡಿಐಸಿಜಿಸಿ ಯ ಪ್ರಕಾರ ಯಾವುದೇ ಬ್ಯಾಂಕ್ ಪರಾವನಿಗೆಯನ್ನ ಕಳೆದುಕೊಂಡರೆ ಅಥವಾ ದಿವಾಳಿ ಆದರೆ ಗ್ರಾಹಕರಿಗೆ 5 ಲಕ್ಷದವರೆಗಿನ ಮೊತ್ತವನ್ನ ಸುರಕ್ಷಿತವಾಗಿ ಮರಳಿ ನೀಡಲಾಗುತ್ತದೆ. ಈ ಮೊತ್ತವು ಗ್ರಾಹಕರ ಉಳಿತಾಯ ಖಾತೆ, ಸ್ಥಿರ ಟೇವಣಿ ಅಥವಾ ಚಾಲ್ತಿ ಖಾತೆ ಸೇರಿದಂತೆ ಎಲ್ಲಾ ರೀತಿಯ ಖಾತೆಗಳಲ್ಲಿ ಇಟ್ಟಿರುವ ಒಟ್ಟು ಮೊತ್ತಕ್ಕೆ ಕೂಡ ಅನ್ವಯಿಸುತ್ತದೆ.

WhatsApp Group Join Now

ಗ್ರಾಹಕರು ಹೇಗೆ ಅರ್ಜಿಯನ್ನ ಸಲ್ಲಿಸಬಹುದು.?

ಪರವಾನಿಗೆ ರದ್ದಾದ ಬ್ಯಾಂಕುಗಳ ಗ್ರಾಹಕರು ಡಿಐಸಿಜಿಸಿಯ ಪೋರ್ಟಲ್ ಅಥವಾ ಸಂಬಂಧಪಟ್ಟ ಬ್ಯಾಂಕ್ ಮೂಲಕ ತಮ್ಮ ಪರಿಹಾರಕ್ಕಾಗಿ ಅರ್ಜಿಯನ್ನ ಸಲ್ಲಿಸಬಹುದು ಎಂದು ಆರ್ಬಿಐ ತಿಳಿಸಿದೆ. ಇದರಿಂದ ಗ್ರಾಹಕರು ತಮ್ಮ ಹಣವನ್ನ ಬೇಗನೇ ಮರಳಿ ಪಡೆಯಬಹುದಾಗಿದೆ.

WhatsApp Group Join Now

Spread the love

Leave a Reply