ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್: ಬಿಹಾರ ಮೂಲದ ಹ್ಯಾಕರ್‌ಗಳ ಸುಳಿವು!

Spread the love

ಸಿನಿಮಾ ನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಪ್ರಕರಣದಲ್ಲಿ ಮಹತ್ವದ ಸುಳಿವು ದೊರೆತಿದೆ. ಸದಾಶಿವನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹ್ಯಾಕರ್‌ಗಳು ಬಿಹಾರ ಮೂಲದವರಾಗಿರುವುದು ಬಹಿರಂಗವಾಗಿದೆ.

WhatsApp Group Join Now

ಬಿಹಾರದಿಂದ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು–ಐದು ಜನ ವಂಚಕರು ಉಪೇಂದ್ರ ದಂಪತಿಯ ಮೊಬೈಲ್ ನಂಬರ್‌ನ್ನು ಹ್ಯಾಕ್ ಮಾಡಿ, ಹಣ ಬೇಡಿಕೆ ಇಟ್ಟಿದ್ದರು. ಸುಮಾರು 1.65 ಲಕ್ಷ ರೂಪಾಯಿಗಳನ್ನು ಪಡೆದು, ನಾಲ್ಕು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆದರೆ ಆ ಖಾತೆಗಳು ಕೂಡ ನಕಲಿ ಎಂಬುದು ಸ್ಪಷ್ಟವಾಗಿದೆ.

ಇದೇ ನಂಬರ್ ಬಳಸಿ, ಅದೇ ದಿನ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವರ ಮೊಬೈಲ್‌ಗಳನ್ನೂ ಹ್ಯಾಕ್ ಮಾಡಲಾಗಿದೆ. ಇದೀಗ ಸದಾಶಿವನಗರ ಪೊಲೀಸರು ಹ್ಯಾಕರ್‌ಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿದ್ದು, ಬಿಹಾರಕ್ಕೆ ವಿಶೇಷ ತಂಡವನ್ನು ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ.

WhatsApp Group Join Now

Spread the love

Leave a Reply