ಬಾಡಿಗೆ ಮನೆ ಕೊಟ್ಟವರಿಗೆ ಇದೀಗ ಈ ಸೇವೆ ರದ್ದು ಆಗ್ತಿದ್ದು, ಈ ಹೊಸ ರೂಲ್ಸ್ ಜಾರಿಯಾಗ್ತಾ ಇದೆ. ಇನ್ನು ಅನ್ನಭಾಗ್ಯ ಯೋಜನೆಯ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳನ್ನ ಪಡೆಯಲು ಅರ್ಹತೆ ಇಲ್ಲದಿದ್ದರೂ ಕೂಡ ಸುಳ್ಳು ಮಾಹಿತಿಯನ್ನ ನೀಡಿ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಪಡೆದಿದ್ರೆ, ಅಂತಹವರ ಮಾಹಿತಿಯನ್ನ ತೆರಿಗೆ ಇಲಾಖೆ, ಕಂದಾಯ ಇಲಾಖೆ, ಅದೇ ರೀತಿ ಆರ್ಟಿಓ ಕಚೇರಿಗಳು ಹಾಗು ಬ್ಯಾಂಕ್ ಇತ್ಯಾದಿ ಮೂಲಗಳಿಂದ ಪಡೆಯಲಾಗಿರುವಂತಹ ಡೇಟಾಗಳಿಂದ ಪತ್ತೆ ಮಾಡಲಾಗುತ್ತಿದೆ.
ಹಾಗಾಗಿ ಬಾಡಿಗೆ ಮನೆ ನೀಡ್ತಾ ಇರುವವರಿಗೂ ಈ ಕಟ್ಟುನಿಟ್ಟಿನ ನಿಯಮವನ್ನ ಹೊರಡಿಸಿದೆ. ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಕೆಲವು ಮಾನದಂಡಗಳಿವೆ. ನಗರ ಪ್ರದೇಶದಲ್ಲಿ 1000 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಾಗಿ ಮನೆಗಳನ್ನ ಬಾಡಿಗೆ ನೀಡುವವರು ಸಾಮಾನ್ಯವಾಗಿ ಆಸ್ತಿಯನ್ನ ಹೊಂದಿರುವವರಂತಹ ವ್ಯಾಪ್ತಿಗೆ ಬರುತ್ತಾರೆ. ಇದು ಅವರನ್ನ ಕೂಡ ಅನರ್ಹರನ್ನಾಗಿ ಮಾಡಿದೆ. ಅಂದ್ರೆ ಇವರು ಕೂಡ ಬಿಪಿಎಲ್ ಕಾರ್ಡನ್ನ ಪಡೆಯಲು ಅನರ್ಹರು.
ಕಳೆದ ಎರಡು ಮೂರು ವರ್ಷಗಳಿಂದ ಆಹಾರ ಇಲಾಖೆ ಅನರ್ಹ ಕಾರ್ಡ್ ಗಳನ್ನ ಪಡೆದಿರುವವರಿಗೆ ಇಲಾಖೆಗೆ ಕಾರ್ಡ್ ಗಳನ್ನ ವಾಪಸ್ ನೀಡುವಂತೆ ಸೂಚನೆಯನ್ನ ಕೂಡ ನೀಡಿತ್ತು. ಆದರೆ ಇದೀಗ ಬಾಡಿಗೆ ನೀಡ್ತಾ ಇರುವಂತಹ ಮನೆಗಳಿಗೆ ಅನರ್ಹ ಭೀತಿ ಕಾಡುತ್ತಿವೆ. ಹಾಗಾಗಿ ಅಂತಹವರ ಬಿಪಿಎಲ್ ಕಾರ್ಡನ್ನ ಕೂಡ ರದ್ದುಪಡಿಸಲು ಇದೀಗ ಎಚ್ಚರಿಕೆಯನ್ನ ನೀಡಿದೆ. ಹಾಗಾಗಿ ಅಂತವರ ಕಾರ್ಡನ್ನ ಎಪಿಎಲ್ ಅನ್ನಾಗಿ ಪರಿವರ್ತಿಸಿ ಅಥವಾ ಕಾರ್ಡನ್ನ ಸಂಪೂರ್ಣವಾಗಿ ರದ್ದು ಕೂಡ ಪಡಿಸಬಹುದು.
ಹಾಗಾಗಿ ಅನರ್ಹ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ತಮ್ಮ ಬಿಪಿಎಲ್ ಕಾರ್ಡ್ಗಳನ್ನ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಹಿಂತುರುಗಿಸಬಹುದು. ಹೀಗೆ ಮಾಡುವುದರಿಂದ ಕಾನೂನು ಕ್ರಮಗಳಿಂದ ಕೂಡ ನೀವು ತಪ್ಪಿಸಿಕೊಳ್ಳಬಹುದು.