ಈ ಕಾರಣಕ್ಕೆ BPL ಕಾರ್ಡ್ ಇದ್ದವರ ಮನೆಗೆ ಬರುತ್ತೆ ನೋಟಿಸ್ | ರಾಜ್ಯ ಸರ್ಕಾರದ ನಿರ್ಧಾರ | BPL Card Notice

Spread the love

ಕರ್ನಾಟಕ ರಾಜ್ಯ ಸರ್ಕಾರ ಈಗ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವವರಿಗೆ ನೋಟೀಸ್ ಗಳನ್ನ ಕಳುಹಿಸಲು ಮುಂದಾಗಿದೆ. ಬಿಪಿಎಲ್ ರೇಷನ್ ಕಾರ್ಡುಗಳನ್ನು ಹೊಂದಿರುವವರು ಈ ನೋಟೀಸ್ಗೆ ಉತ್ತರವನ್ನು ಕೊಡದೇ ಇದ್ದರೆ, ಅವರ ಮೇಲೆ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಮಾತ್ರವಲ್ಲದೇ ಅವರಿಗೆ ಭಾರೀ ಪ್ರಮಾಣದ ದಂಡವನ್ನು ಹಾಕಲಾಗುತ್ತದೆ. ಹಾಗಾದರೆ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರುವ ಯಾವ ಕುಟುಂಬದವರಿಗೆ ನೋಟೀಸ್ ಕಳುಹಿಸಲಾಗುತ್ತದೆ ಮತ್ತು ನೋಟೀಸ್ ಗೆ ಯಾವ ರೀತಿಯಲ್ಲಿ ಉತ್ತರವನ್ನು ಕೊಡಬೇಕು.? ನೋಡೋಣ

WhatsApp Group Join Now

ರಾಜ್ಯ ಸರ್ಕಾರ ಇತ್ತೀಚಿಗೆ ಸುಮಾರು 13 ಲಕ್ಷ ರೇಷನ್ ಕಾರ್ಡುಗಳನ್ನ ರದ್ದು ಮಾಡಿರುವುದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಈ ನಡುವೆ ರಾಜ್ಯ ಸರ್ಕಾರ ಮತ್ತೆ 12 ಲಕ್ಷ ಬಿಪಿಎಲ್ ರೇಷನ್ ಕಾರ್ಡುಗಳಿಗೆ ನೋಟೀಸ್ ಕಳುಹಿಸಲು ಮುಂದಾಗಿದೆ. ಸುಮಾರು 12 ಲಕ್ಷ ರೇಷನ್ ಕಾರ್ಡುಗಳು ಸಂಶಯಾತ್ಮಕ ರೇಷನ್ ಕಾರ್ಡುಗಳಾಗಿದ್ದು, ಈ ಕಾರಣಗಳಿಂದ ಅವರಿಗೆ ನೋಟೀಸ್ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಆಹಾರ ಇಲಾಖೆಯ ಮಾನದಂಡಗಳನ್ನ ಉಲ್ಲಂಘನೆ ಮಾಡಿ ಪಡೆದುಕೊಂಡ ಅನರ್ಹ ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಈಗ ನೋಟಿಸ್ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಯಾರು ಈ ನೋಟಿಸ್ ಅನ್ನ ಪಡೆದುಕೊಳ್ಳುತ್ತಾರೋ, ಅವರು ನೋಟಿಸ್ ಗೆ ಮೂರು ದಿನಗಳ ಒಳಗೆ ಉತ್ತರವನ್ನು ಕೊಡಬೇಕು. ಒಂದು ವೇಳೆ ನೋಟಿಸ್ ಪಡೆದುಕೊಂಡವರು ಸರಿಯಾಗಿ ಉತ್ತರವನ್ನ ಕೊಡದೇ ಇದ್ದರೆ ಅವರ ಮೇಲೆ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಮಾತ್ರವಲ್ಲದೇ ಅವರು ಇಲ್ಲಿಯ ತನಕ ಎಷ್ಟು ಪಡಿತರ ಧಾನ್ಯಗಳನ್ನ ಪಡೆದುಕೊಂಡಿದ್ದಾರೋ, ಅದಕ್ಕೆ ಬಡ್ಡಿ ಸಮೇತ ಹಣವನ್ನ ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿ ಈ ತಿಂಗಳಿಂದ ಸಂಶಯಾತ್ಮಕ ಕಾರ್ಡುಗಳಿಗೆ ಅಕ್ಕಿ ವಿತರಣೆಯನ್ನ ಮಾಡಲಾಗುವುದಿಲ್ಲ.

WhatsApp Group Join Now

ಸರ್ಕಾರಿ ಕೆಲಸದಲ್ಲಿ ಇರುವವರು, ಸ್ವಂತ ಬಿಸಿನೆಸ್ ಮಾಡುತ್ತಿರುವವರು, ಜಿಎಸ್ಟಿ ಪಾವತಿ ಮಾಡುತ್ತಿರುವವರು ಅಥವಾ ತೆರಿಗೆ ಪಾವತಿ ಮಾಡುತ್ತಿರುವವರು ಬಿಪಿಎಲ್ ರೇಷನ್ ಕಾರ್ಡುಗಳನ್ನ ಪಡೆದುಕೊಳ್ಳಲು ಅರ್ಹತೆಯನ್ನ ಪಡೆದುಕೊಂಡಿರುವುದಿಲ್ಲ. ಒಂದು ವೇಳೆ ಅವರು ಬಿಪಿಎಲ್ ರೇಷನ್ ಕಾರ್ಡುಗಳನ್ನ ಮಾಡಿಸಿಟ್ಟುಕೊಂಡಿದ್ದರೆ ಅವರಿಗೆ ನೋಟೀಸ್ ಕಳುಹಿಸಲಾಗಿದೆ. ಅವರು ಈ ನೋಟೀಸ್ ಗೆ ಮೂರು ದಿನಗಳ ಒಳಗಾಗಿ ಕಡ್ಡಾಯವಾಗಿ ಉತ್ತರಿಸಬೇಕಾಗಿದೆ. ಇಲ್ಲವಾದರೆ ಅವರ ಮೇಲೆ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ.


Spread the love

Leave a Reply