ಬೇರೆಯವರ ಸಾಲಕ್ಕೆ ಜಾಮೀನು ಹಾಕಿದವರಿಗೆ ದೇಶಾದ್ಯಂತ ಹೊಸ ನಿಯಮ – RBI ಘೋಷಣೆ | Loan RBI Rules

Spread the love

ಸಾಮಾನ್ಯವಾಗಿ ಕೆಲವು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಒಬ್ಬ ವ್ಯಕ್ತಿಗೆ ಸಾಲವನ್ನ ಕೊಡುವ ಸಮಯದಲ್ಲಿ ಜಾಮೀನುದಾರರಿಂದ ಸಹಿಯನ್ನ ಪಡೆದುಕೊಳ್ಳುತ್ತದೆ. ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ವೈಯುಕ್ತಿಕ ಸಾಲ ಅಥವಾ ಬೇರೆ ಯಾವುದೇ ರೀತಿಯ ಸಾಲವನ್ನ ನೀಡುವ ಸಮಯದಲ್ಲಿ ಜಾಮೀನುದಾರರಿಂದ ಸಹಿಯನ್ನ ಪಡೆದುಕೊಳ್ಳುತ್ತದೆ. ಜಾಮೀನುದಾರ ಆತ ಪಡೆದುಕೊಂಡ ಸಾಲಕ್ಕೆ ಜವಾಬ್ದಾರಿಯನ್ನ ಪಡೆದುಕೊಳ್ಳುತ್ತಾನೆ.

WhatsApp Group Join Now

ಆದರೆ ಬ್ಯಾಂಕಿನಲ್ಲಿ ಸಾಲವನ್ನ ಮಾಡಿದ ವ್ಯಕ್ತಿ ಆ ಸಾಲವನ್ನ ತೀರಿಸದೇ ಇದ್ದರೆ ಅದಕ್ಕೆ ಜಾಮೀನು ಹಾಕಿದವರು ಆ ಸಾಲವನ್ನು ತೀರಿಸಬೇಕಾ.? ಸಾಲಕ್ಕೆ ಜಾಮೀನು ಹಾಕಿದವರು ಆ ಸಾಲಕ್ಕೆ ಯಾವ ರೀತಿಯಲ್ಲಿ ಹೊಣೆಗಾರಿಕೆಯನ್ನ ಪಡೆದುಕೊಳ್ಳುತ್ತಾರೆ.? ಬ್ಯಾಂಕಿನ ಸಿಬ್ಬಂದಿಗಳು ಸಾಲಕ್ಕೆ ಜಾಮೀನು ಹಾಕಿದವರಿಗೆ ಕರೆ ಮಾಡಿ ಸಾಲವನ್ನ ವಸೂಲಿ ಮಾಡಬಹುದಾ.? ಇದಕ್ಕೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಯಾವ ನಿಯಮಗಳು ಜಾರಿಯಲ್ಲಿದೆ.? ಇವೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.

ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದ ಪ್ರಕಾರ ಬೇರೊಬ್ಬರ ಸಾಲವನ್ನ ಖಾತರಿಪಡಿಸುವ ಅಥವಾ ಸಾಲಗಾರರನ್ನು ಪಾವತಿಸಲು ವಿಫಲವಾದರೆ ಬ್ಯಾಂಕಿಗೆ ಪಾವತಿಸುವ ಭರವಸೆ ನೀಡುವ ವ್ಯಕ್ತಿಯನ್ನ ಗ್ಯಾರೆಂಟರ್ ಎಂದು ಕರೆಯುತ್ತಾರೆ. ಬೇರೆಯವರ ಸಾಲಕ್ಕೆ ಗ್ಯಾರೆಂಟರ್ ಆಗುವುದು ಒಂದು ಗಂಭೀರವಾದ ಹಣಕಾಸಿನ ಜವಾಬ್ದಾರಿಯಾಗಿದೆ. ಸಾಲವನ್ನ ಮಾಡಿದವನು ಡಿಫಾಲ್ಟ್ ಆಗಿದ್ದರೆ, ಬ್ಯಾಂಕಿನ ಸಿಬ್ಬಂದಿಗಳು ಮೊದಲು ಆತನಿಂದ ಸಾಲವನ್ನ ವಸೂಲಿ ಮಾಡಲು ಪ್ರಯತ್ನ ಮಾಡುತ್ತದೆ. ಆದರೆ ಆತ ಸಾಲವನ್ನ ಮರುಪಾವತಿ ಮಾಡದೇ ಇದ್ದರೆ ಖಾತರಿದಾರ ಅಂದರೆ ಜಾಮೀನುದಾರರಿಗೆ ಒತ್ತಡವನ್ನು ಹಾಕಲು ಸಿಬ್ಬಂದಿಗಳು ಮುಂದಾಗುತ್ತಾರೆ.

WhatsApp Group Join Now

ಬೇರೆಯವರ ಸಾಲಕ್ಕೆ ಜಾಮೀನು ಹಾಕುವುದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಕೂಡ ದೊಡ್ಡ ಪರಿಣಾಮವನ್ನ ಬೀರುತ್ತದೆ. ಆ ವ್ಯಕ್ತಿ ಸಾಲವನ್ನ ಸರಿಯಾದ ಸಮಯಕ್ಕೆ ತೀರಿಸದೇ ಇದ್ದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ. ಈ ಕಾರಣಗಳಿಂದ ಬೇರೆ ಯಾವುದೇ ಒಬ್ಬ ವ್ಯಕ್ತಿಯ ಸಾಲಕ್ಕೆ ಜಾಮೀನು ಹಾಕುವ ಮುನ್ನ ನೀವು ಸರಿಯಾಗಿ ಆತನ ಬಗ್ಗೆ ತಿಳಿದುಕೊಳ್ಳಬೇಕು ಸಾಲವನ್ನ ಪಡೆದುಕೊಂಡ ವ್ಯಕ್ತಿ ಆ ಸಾಲವನ್ನ ತೀರಿಸದೇ ಇದ್ದರೆ ಬ್ಯಾಂಕಿನ ಸಿಬ್ಬಂದಿಗಳು ಬೇರೆ ದಾರಿ ಇಲ್ಲದೆ ಗ್ಯಾರೆಂಟರ್ ನಿಂದ ಸಾಲದ ಮರುಪಾವತಿಗೆ ಬೇಡಿಕೆಯನ್ನ ಇಡುತ್ತಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದ ಪ್ರಕಾರ ಸಾಲವನ್ನು ಪಡೆದುಕೊಂಡ ವ್ಯಕ್ತಿ ಆ ಸಾಲವನ್ನು ತೀರಿಸದೇ ಇದ್ದರೆ ಅದಕ್ಕೆ ಜಾಮೀನುದಾರನು ನೇರವಾಗಿ ಹೊಣೆಯಾಗುತ್ತಾನೆ. ಕೆಲವು ಸಂದರ್ಭದಲ್ಲಿ ಜಾಮೀನು ಹಾಕಿದವರು ಆ ಸಾಲವನ್ನು ತೀರಿಸಬೇಕಾಗುತ್ತದೆ. ಬ್ಯಾಂಕುಗಳು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಈ ಪ್ರಕ್ರಿಯೆಯನ್ನ ನಡೆಸುತ್ತದೆ. ಬ್ಯಾಂಕುಗಳು ಯಾವುದೇ ಸಾಲವನ್ನು ವಸೂಲಿ ಮಾಡುವ ಮುನ್ನ ಗ್ಯಾರೆಂಟರ್ಗಳಿಗೆ ನೋಟೀಸ್ ಕೊಡುತ್ತದೆ. ಅದೇ ರೀತಿಯಲ್ಲಿ ಜಾಮೀನುದಾರರಿಗೆ ಸಾಲವನ್ನ ತೀರಿಸಲು ಕೆಲವು ಸಮಯಾವಕಾಶವನ್ನ ಕೂಡ ನೀಡಲಾಗುತ್ತದೆ.

WhatsApp Group Join Now

ಈ ಕಾರಣಗಳಿಂದ ಬೇರೊಬ್ಬ ವ್ಯಕ್ತಿಯ ಸಾಲಕ್ಕೆ ಜಾಮೀನು ಹಾಕುವ ಮುನ್ನ ಜಾಮೀನು ಪತ್ರವನ್ನ ಸರಿಯಾಗಿ ಓದಿಕೊಳ್ಳುವುದು ಅತಿ ಅಗತ್ಯವಾಗಿರುತ್ತೆ. ಜಾಮೀನು ಪತ್ರದಲ್ಲಿ ನೀವು ಆತ ಪಡೆದುಕೊಂಡ ಸಾಲಕ್ಕೆ ಖಾತರಿಯಾಗಿರುತ್ತೀರಿ ಅಂತ ಬರೆಯಲಾಗಿರುತ್ತದೆ. ಒಂದು ವೇಳೆ ಆತ ಸಾಲವನ್ನು ತೀರಿಸದೇ ಇದ್ದರೆ ಆ ಸಾಲಕ್ಕೆ ನೀವು ಸಂಪೂರ್ಣ ಜವಾಬ್ದಾರಿಯನ್ನು ಪಡೆದುಕೊಳ್ಳುತ್ತೀರಿ ಅಂತ ಆ ಖಾತರಿ ಪತ್ರದಲ್ಲಿ ಬರೆಯಲಾಗಿರುತ್ತದೆ. ಈ ಕಾರಣಗಳಿಂದ ನೀವು ಬೇರೆಯವರ ಸಾಲದ ಪತ್ರಕ್ಕೆ ಸಹಿ ಹಾಕುವ ಮುನ್ನ ಎಚ್ಚರದಿಂದ ಇರಬೇಕು.


Spread the love

Leave a Reply