Jio Sim : ನೀವು ಕೂಡ ಜಿಯೋ ಸಿಮ್ ಬಳಕೆದಾರರಾಗಿದ್ರೆ ಮುಕೇಶ್ ಅಂಬಾನಿ ಅವರ ಕಡೆಯಿಂದ ನಿಮಗೊಂದು ಬಿಗ್ ಅಪ್ಡೇಟ್ ಬಂದಿದೆ. ಹೌದು, ಜಿಯೋ ಸಿಮ್ ಬಳಕೆ ಮಾಡುತ್ತಿರುವವರು ಇನ್ನು ಮುಂದೆ 90 ದಿನಗಳ ಕಾಲ ರಿಚಾರ್ಜ್ ಇಲ್ಲದೆ ಸಿಮ್ ಅನ್ನ ಬಳಕೆ ಮಾಡಬಹುದಾಗಿದೆ. ದೀಪಾವಳಿ ಹಬ್ಬಕ್ಕು ಮುನ್ನವೇ ಮುಕೇಶ್ ಅಂಬಾನಿ ಅವರು ತನ್ನ ಎಲ್ಲಾ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ ಅಂತ ಹೇಳಬಹುದು. ಹಾಗಾದ್ರೆ ರೀಚಾರ್ಜ್ ಇಲ್ಲದೆ 90 ದಿನಗಳ ಕಾಲ ಜಿಯೋ ಸಿಮ್ ಆಕ್ಟಿವ್ ಆಗಿ ಇಟ್ಟುಕೊಳ್ಳುವುದು ಹೇಗೆ.?
ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡುವವರು ಎರಡು ಸಿಮ್ ಅನ್ನ ಬಳಕೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಬ್ಯಾಂಕಿಂಗ್ ವಹಿವಾಟು ಮತ್ತು ವೈಯಕ್ತಿಕ ವಹಿವಾಟುಗಳ ಉದ್ದೇಶದಿಂದ ಸಾಮಾನ್ಯವಾಗಿ ಎರಡು ಸಿಮ್ ಅನ್ನ ಬಳಕೆ ಮಾಡುತ್ತಾರೆ. ಮತ್ತು ಎರಡು ಸಿಮ್ ಗಳಿಗೂ ಕೂಡ ರೀಚಾರ್ಜ್ ನ್ನ ಮಾಡುತ್ತಾರೆ. ಕೆಲವು ಬಾರಿ ಎರಡೆರಡು ಸಿಮ್ ಬಳಕೆ ಮಾಡುವವರು ರೀಚಾರ್ಜ್ಗೆ ಹಣವಿಲ್ಲದೆ ಒಂದು ಸಿಮ್ಗೆ ಮಾತ್ರ ರೀಚಾರ್ಜ್ ನ್ನ ಮಾಡುತ್ತಾರೆ. ಸಾಮಾನ್ಯವಾಗಿ ರೀಚಾರ್ಜ್ ಮಾಡದೇ ಇದ್ದರೆ ಕೆಲವು ದಿನಗಳ ನಂತರ ಆ ಸಿಮ್ ಅನ್ನುವುದು ನಿಷ್ಕ್ರಿಯವಾಗುತ್ತೆ. ಆದರೆ ಇನ್ನು ಮುಂದೆಜಿಯೋ ಸಿಮ್ ಬಳಕೆ ಮಾಡುವವರು 90 ದಿನಗಳವರೆಗೆ ರೀಚಾರ್ಜ್ ಮಾಡದೆ ಇದ್ದರೂ ಕೂಡ ಅವರ ಸಿಮ್ ಆಕ್ಟಿವ್ ಆಗಿರುತ್ತೆ.
ಜಿಯೋ ಟೆಲಿಕಾಂ ಕಂಪನಿ ಈಗ ತನ್ನ ಗ್ರಾಹಕರಿಗೆ 90 ದಿನಗಳ ಕಾಲಾವಕಾಶವನ್ನ ಕೊಟ್ಟಿದೆ. ಜಿಯೋ ಗ್ರಾಹಕರು ರೀಚಾರ್ಜ್ ಇಲ್ಲದೆ ಇದ್ದರೂ ಕೂಡ 90 ದಿನಗಳವರೆಗೆ ಕರೆ ಮತ್ತು ಎಸ್ಎಂಎಸ್ ನ್ನ ಸ್ವೀಕಾರ ಮಾಡಬಹುದು. ರೀಚಾರ್ಜ್ ಇಲ್ಲದೇ ಇದ್ದರೂ ಕೂಡ ಅವರ ಸಿಮ್ 90 ದಿನಗಳವರೆಗೆ ಆಕ್ಟಿವ್ ಆಗಿರುತ್ತೆ. ಒಂದುವೇಳೆ 90 ದಿನಗಳ ಕಾಲ ನೀವು ರಿಚಾರ್ಜ್ ಮಾಡದೆ ಇದ್ದರೆ ನಿಮ್ಮ ಸಿಮ್ ನಿಷ್ಕ್ರಿಯವಾಗುತ್ತದೆ.
90 ದಿನಗಳ ನಂತರ ನಿಮ್ಮ ಸಿಮ್ ಬ್ಯಾಲೆನ್ಸ್ 20 ರೂಪಾಯಿಗಿಂತ ಹೆಚ್ಚಿದ್ದರೆ ಕಂಪನಿ 20 ರೂಪಾಯಿಯನ್ನ ಕಡಿತಗೊಳಿಸಿ ಮತ್ತೆ ನಿಮಗೆ 30 ದಿನಗಳ ಕಾಲಾವಕಾಶವನ್ನ ಕೂಡ ಕೊಡುತ್ತದೆ. ಈ ಮೂಲಕ ಜಿಯೋ ಕಂಪನಿ ದೀಪಾವಳಿ ಹಬ್ಬಕ್ಕೂ ಮುನ್ನವೇ ತನ್ನ ಎಲ್ಲಾ ಗ್ರಾಹಕರಿಗೆ ಬಹು ದೊಡ್ಡ ಗುಡ್ ನ್ಯೂಸ್ ಅನ್ನ ಕೊಟ್ಟಿದೆ ಅಂತ ಹೇಳಬಹುದು.