Farmer Loan Waiver : ನೀವು ಕೂಡ ರೈತರಾಗಿದ್ದರೆ ರಾಜ್ಯ ಸರ್ಕಾರದಿಂದ ನಿಮಗೊಂದು ಬಿಗ್ ಅಪ್ಡೇಟ್ ಬಂದಿದೆ. ರಾಜ್ಯ ಸರ್ಕಾರ ಈಗ ಎಲ್ಲಾ ರೈತರಿಗೆ ದಸರಾ ಹಬ್ಬದ ಗಿಫ್ಟ್ ಕೊಡಲು ಮುಂದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಈಗ ರೈತರ ಬೆಳೆಹಾನಿ ಪರಿಹಾರ ಮತ್ತು ರೈತರ ಸಾಲಮನ್ನಾಕ್ಕೆ ಸಂಬಂಧಪಟ್ಟಂತೆ ಬಹು ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ. ಹಾಗಾದರೆ ರೈತರ ಬೆಳೆಹಾನಿ ಪರಿಹಾರ ಮತ್ತು ಸಾಲಮನ್ನಾಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಅವರು ಹೇಳಿದ್ದೇನು.? ನೋಡೋಣ.
ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ನಿಮಗೆಲ್ಲರಿಗೂ ಕೂಡ ತಿಳಿದೇ ಇದೆ. ಈ ಕಾರಣಗಳಿಂದ ಸಿದ್ದರಾಮಯ್ಯ ಅವರು ರೈತರ ಸಾಲಮನ್ನಾ ಮತ್ತು ಬೆಳೆಹಾನಿ ಪರಿಹಾರದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಆದೇಶವನ್ನ ಹೊರಡಿಸಿದ್ದಾರೆ. ಇನ್ನು ಕಳೆದ ವರ್ಷಕ್ಕೆ ಹೋಲಿಕೆಯನ್ನ ಮಾಡಿದರೆ ಈ ವರ್ಷದಲ್ಲಿ ಶೇಕಡ 10%ರಷ್ಟು ಹೆಚ್ಚು ಬೆಳೆಹಾನಿಯಾಗಿದೆ.
ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ ಬೆಳೆಹಾನಿಗೆ ಸಂಬಂಧಪಟ್ಟಂತೆ ಸಮೀಕ್ಷೆಯನ್ನ ಮಾಡಲು ಅಧಿಕಾರಿಗಳನ್ನ ಕೂಡ ನೇಮಕ ಮಾಡಿದೆ. ಸಮೀಕ್ಷೆಯ ವರದಿ ಬಂದ ಬಳಿಕ ಬೆಳೆಹಾನಿ ಮತ್ತು ಸಾಲಮನ್ನಾಕ್ಕೆ ಸಂಬಂಧಪಟ್ಟಂತೆ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಅಂತ ಮಾಧ್ಯಮದ ಮುಂದೆ ಸಿದ್ದರಾಮಯ್ಯ ಅವರು ಈಗ ಹೇಳಿಕೆಯನ್ನ ಕೊಟ್ಟಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ಈ ಹೇಳಿಕೆ ಸಾಕಷ್ಟು ರೈತರ ಸಂತಸಕ್ಕೆ ಕಾರಣವಾಗಿದೆ.