ಕೇಂದ್ರ ಕೃಷಿ ಭೂಮಿಯ ಖರೀದಿ ಹಾಗೂ ಬಳಕೆಯನ್ನ ಸರಳಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಇದೀಗ ಹೊಸ ನಿಯಮಗಳನ್ನ ಜಾರಿ ಮಾಡಿದೆ. ಈ ಹೊಸ ನಿಯಮಗಳು ಕೃಷಿ ಮತ್ತೆ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನ ತರಲಿದೆ. ಹಾಗಾದ್ರೆ ಏನು ಆ ನಿಯಮ ಅಂತ ತಿಳಿಯೋಣ.
ಎರಡು ಎಕರವರೆಗೆ ವಿನಾಯಿತಿ :- ಶಿಕ್ಷಣ ಸಂಸ್ಥೆಗಳು ಅಥವಾ ಕೈಗಾರಿಕೆಗಳನ್ನು ಸ್ಥಾಪಿಸಲು ಎರಡು ಎಕರೆವರೆಗಿನ ಕೃಷಿಭೂಮಿಗೆ ಭೂ ಪರಿವರ್ತನೆ ಮಾಡುವ ಅಗತ್ಯ ಇರುವುದಿಲ್ಲ. ಇದು ಸಣ್ಣ ಪ್ರಮಾಣದ ಉದ್ದಿಮೆದಾರರಿಗೆ ದೊಡ್ಡ ನಿರಳತೆಯನ್ನ ನೀಡಿದೆ.
ಖರೀದಿ ಮಿತಿ ಹೆಚ್ಚಳ :- ಶಿಕ್ಷಣ ಸಂಸ್ಥೆಗಳು ಮತ್ತೆ ಕೈಗಾರಿಕೆಗಳು ಈಗ ನಾಲ್ಕು ಹೆಕ್ಟೇರ್ಗಳವರೆಗೆ ಅಂದರೆ ಸುಮಾರು 10 ಎಕರೆ ಜಮೀನಿಗೆ ಕೃಷಿಭೂಮಿ ಖರೀದಿಸಲು ಅವಕಾಶವನ್ನ ಕೂಡ ಕಲ್ಪಿಸಿದೆ.
ದಂಡದ ನಿಯಮ :- ಕೃಷಿಭೂಮಿಯನ್ನ ಯಾವುದೇ ಅನುಮತಿ ಇಲ್ಲದೆ ಕೃಷಿಯೇತರ ಉದ್ದೇಶಗಳಿಗೆ ಬಳಸಿದರೆ ಒಂದು ಲಕ್ಷ ರೂಪಾಯಿಗಳ ದಂಡವನ್ನ ವಿಧಿಸಲಾಗುವುದು. ಇದು ನಿಯಮಬಾಹಿರ ಚಟುವಟಿಕೆಗಳನ್ನು ತಡೆಯುವ ಗುರಿಯನ್ನ ಕೂಡ ಹೊಂದಿದೆ.
ಸ್ವಯಂಚಾಲಿತ ಪರಿವರ್ತನೆ :- ನವೀಕರಿಸಬಹುದಾದ ಇಂಧನ ಯೋಜನೆಗಳಿಗಾಗಿ ಕೃಷಿ ಭೂಮಿಯನ್ನ ಬಳಸಲು ಸ್ವಯಂಚಾಲಿತ ಪರಿವರ್ತನೆ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ಕೂಡ ಜಾರಿಗೆ ತರಲಾಗಿದೆ.
ಅಧಿಕಾರ ಹಂಚಿಕೆ :- ಭೂಮಿ ಖರೀದಿಗೆ ಸಂಬಂಧಿಸಿದ ಅಧಿಕಾರವನ್ನ ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು. ಇದರಿಂದ ಈ ಪ್ರಕ್ರಿಯೆಗಳು ಮತ್ತಷ್ಟು ವೇಗ ಪಡೆಯುವ ನಿರೀಕ್ಷೆ ಇದೆ. ಈ ಎಲ್ಲಾ ನಿಯಮಗಳು ಕೂಡ ಕೃಷಿಭೂಮಿ ಖರೀದಿಗೆ ಬಹಳಷ್ಟು ಸಹಕಾರಿ ಆಗಲಿದೆ.