ಮುಕಳೆಪ್ಪನಿಗೆ ಆಘಾತ ಕೊಟ್ಟ ಹುಡುಗಿ ತಾಯಿ.! ಹೇಳಿದ್ದೇನು ಗೊತ್ತಾ.? Mukaleppa marriage Case

Spread the love

ಇತ್ತೀಚಿಗೆ ಉತ್ತರ ಕರ್ನಾಟಕದ ಖ್ಯಾತ ಯೂಟ್ಯೂಬರ್ ಅನಿಸಿಕೊಂಡಿರುವ ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರು ಒಬ್ಬ ಹಿಂದೂ ಯುವತಿಯನ್ನ ಮದುವೆಯಾಗಿದ್ದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಕಳೆದ ಜೂನ್ ತಿಂಗಳಲ್ಲಿ ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗಾಯತ್ರಿ ಅನ್ನುವ ಹಿಂದೂ ಯುವತಿಯನ್ನ ಮದುವೆಯಾಗಿದ್ದರು.

WhatsApp Group Join Now

ಆದರೆ ಇತ್ತೀಚಿಗೆ ಬಜರಂಗದ ದಳದ ಕಾರ್ಯಕರ್ತರು ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರು ಸುಳ್ಳು ದಾಖಲೆಯನ್ನ ಕೊಟ್ಟು ಹಿಂದೂ ಯುವತಿಗೆ ಸುಳ್ಳು ಹೇಳಿ ಮದುವೆಯನ್ನ ಮಾಡಿಕೊಂಡಿದ್ದಾನೆ. ಅಷ್ಟೇ ಮಾತ್ರವಲ್ಲದೆ ಆತ ತನ್ನ ವಿಡಿಯೋದಲ್ಲಿ ಹಿಂದೂ ಧರ್ಮವನ್ನ ಅವಹೇಳನ ಮಾಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಬಜರಂಗದಳದ ಕಾರ್ಯಕರ್ತರ ದೂರಿನ ಕಾರಣ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮತ್ತು ಅವರ ಪತ್ನಿಯಾದ ಗಾಯತ್ರಿಯವರನ್ನ ಪೊಲೀಸ್ ಠಾಣೆಗೆ ಕರಿಸಿ ವಿಚಾರಣೆಯನ್ನು ಕೂಡ ಮಾಡಲಾಗಿದೆ.

ಪೊಲೀಸರ ಮುಂದೆ ಗಾಯತ್ರಿಯವರು ತಾನು ಚೆನ್ನಾಗಿದ್ದೇನೆ ಅಂತ ಹೇಳಿಕೆಯನ್ನ ಕೊಟ್ಟಿದ್ದರು. ಗಾಯತ್ರಿಯವರು ಈ ರೀತಿಯಾಗಿ ಹೇಳಿಕೆ ಕೊಟ್ಟ ಬೆನ್ನಲ್ಲೇ ಈಗ ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಗಾಯತ್ರಿಯವರ ತಾಯಿ ಇನ್ನೊಂದು ಆರೋಪವನ್ನ ಮಾಡಿದ್ದಾರೆ. ಗಾಯತ್ರಿಯವರ ತಾಯಿ ಶಿವಕ್ಕ ಅವರು ಈಗ ಮುಕಳೆಪ್ಪ ಅವರ ಮೇಲೆ ದೊಡ್ಡ ಆರೋಪವನ್ನ ಮಾಡಿದ್ದು, ಸದ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಕ್ವಾಜ ಅಲಿಯಾಸ್ ಮುಕಳೆಪ್ಪ ತನ್ನ ಮಗಳಿಗೆ ಮೋಸ ಮಾಡಿದ್ದಾನೆ ಅಂತ ಗಾಯತ್ರಿಯವರ ತಾಯಿ ಶಿವಕ್ಕ ಈಗ ಆರೋಪವನ್ನ ಮಾಡಿದ್ದಾರೆ.

WhatsApp Group Join Now

ಮುಕಳೆಪ್ಪ ತನ್ನ ಮಗಳನ್ನ ಟೂರ್ ಮಾಡಲು ಕರೆದುಕೊಂಡು ಹೋಗುತ್ತಿದ್ದ. ನಾವು ಹಳ್ಳಿಯವರು ನಾವು ಎಲ್ಲಿಯೂ ಹೋಗಲ್ಲ. ತನ್ನ ಮಗಳು ದೊಡ್ಡ ಹೆಸರು ಮಾಡಲಿ ಅನ್ನುವ ಕಾರಣಕ್ಕೆ ನಾನು ಆತನ ಜೊತೆ ತನ್ನ ಮಗಳನ್ನ ಕಳುವಿಸಿಕೊಟ್ಟೆ. ಕಾಮಿಡಿ ವಿಡಿಯೋ ಮಾಡುವ ಉದ್ದೇಶದಿಂದ ತನ್ನ ಮಗಳನ್ನ ಆತನ ಜೊತೆ ಕಳುಹಿಸಿಕೊಟ್ಟೆ. ಆದರೆ ಈಗ ಆತ ತನಗೆ ಮೋಸ ಮಾಡಿದ್ದಾನೆ. ನನ್ನ ಮಗಳಿಗೆ ಮೋಸ ಮಾಡಿ ಮದುವೆಯನ್ನ ಮಾಡಿಕೊಂಡಿದ್ದಾನೆ. ನಮ್ಮ ಹಿಂದೂ ಜನರು ಏನು ಶಿಕ್ಷೆ ಕೊಡಬೇಕು ಕೊಡಿ ಅಂತ ಈಗ ಗಾಯತ್ರಿಯವರ ತಾಯಿ ಆರೋಪವನ್ನ ಮಾಡಿದ್ದಾರೆ.

ಅಷ್ಟೇ ಮಾತ್ರವಲ್ಲದೆ ನನ್ನ ಮಗಳನ್ನ ಕರೆದುಕೊಂಡು ಬಂದು ನನಗೆ ಒಪ್ಪಿಸಿ ಅಂತ ಮನವಿಯನ್ನ ಕೂಡ ಮಾಡಿಕೊಂಡಿದ್ದಾರೆ. ಚಿತ್ರೀಕರಣ ಮಾಡುವ ಉದ್ದೇಶದಿಂದ ಮುಕ್ಕಳಪ್ಪ ತನ್ನ ಮಗಳನ್ನ ಮೂರು ನಾಲ್ಕು ದಿನ ಟೂರ್ ಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಆತ ತನ್ನ ಮಗಳ ತಲೆ ಕೆಡಿಸಿ ಮದುವೆಯಾಗಿದ್ದಾನೆ. ಸದ್ಯ ಗಾಯತ್ರಿಯವರ ತಾಯಿ ಶಿವಕ್ಕ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.

WhatsApp Group Join Now

Spread the love

Leave a Reply