Aadhaar Card New Updates 2025 : ದೇಶದಾದ್ಯಂತ ಕೆಲವು ಪ್ರಮುಖ ಸರ್ಕಾರಿ ಸೇವೆಗಳನ್ನ ಪಡೆಯಲು ಇನ್ಮುಂದೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸರ್ಕಾರ ಘೋಷಣೆ ಮಾಡಿದೆ. ಇದು ಸಾಮಾನ್ಯ ನಾಗರಿಕರಿಗೆ ಭಾರೀ ಅನುಕೂಲವಾಗಿದ್ದು, ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಕೆಲಸಗಳು ನಿಂತು ಹೋಗ್ತಾ ಇದ್ದು ಈಗ ಈ ಸಮಸ್ಯೆ ತಪ್ಪಿದಂತಾಗಿದೆ. ಹಾಗಾದ್ರೆ ಯಾವ ಕೆಲಸಗಳಿಗೆ ಇನ್ಮುಂದೆ ಆಧಾರ್ ಕಾರ್ಡ್ ಬೇಕಾಗಿಲ್ಲ ಅನ್ನುವುದನ್ನ ತಿಳಿಯೋಣ.
ಹೊಸ ನಿಯಮಗಳ ಪ್ರಕಾರ ಈ ಪ್ರಮುಖ ಸೇವೆಗಳಿಗೆ ಇನ್ಮುಂದೆ ಆಧಾರ್ ಕಾರ್ಡ್ ಬದಲು ಇತರೇ ದಾಖಲೆಗಳನ್ನ ನೀವು ಬಳಕೆ ಮಾಡಬಹುದು. ಮೊದಲನೆದಾಗಿ ಬ್ಯಾಂಕ್ ಖಾತೆಯನ್ನ ತೆರೆಯಲು, ಹೊಸ ಬ್ಯಾಂಕ್ ಖಾತೆ ತೆರೆಯಲು ಇನ್ಮುಂದೆ ಆಧಾರ್ ಕಾರ್ಡ್(Aadhaar Card) ಕಡ್ಡಾಯವಲ್ಲ. ನಿಮ್ಮ ಬಳಿ ಪ್ಯಾನ್ ಕಾರ್ಡ್ (Pan Card) ವೋಟರ್ ಐಡಿ (Voter ID) ಪಾಸ್ಪೋರ್ಟ್ (Passport) ಅನ್ನ ಬಳಸಿಕೊಂಡು ಇನ್ಮುಂದೆ ನೀವು ಹೊಸ ಬ್ಯಾಂಕ್ ಖಾತೆಯನ್ನ ತೆರೆಯಬಹುದು ಎಂದು ಸರಕಾರ ತಿಳಿಸಿದೆ.
ಅದೇ ರೀತಿ ಮೊಬೈಲ್ ಸಿಮ್ ಖರೀದಿ. ಮೊಬೈಲ್ ಸಿಮ್(Sim Card) ಪಡೆಯಲು ಆಧಾರ್ ಕಾರ್ಡ್ ಕಡ್ಡಾಯದಿಂದ ಇದೀಗ ವಿನಾಯಿತಿ ನೀಡಲಾಗಿದೆ. ಬದಲಾಗಿ ಡ್ರೈವಿಂಗ್ ಲೈಸೆನ್ಸ್(Driving Licence) ಅಥವಾ ಪಾಸ್ಪೋರ್ಟ್ ಐಡಿಯನ್ನ (Passport) ಮಾನ್ಯ ಗುರುತಿನ ದಾಖಲೆಯಾಗಿ ಸ್ವೀಕಾರ ಮಾಡಲಾಗ್ತಾಯಿದೆ.
ಪಿಂಚಣಿ ಸೇವೆಗಳು ಹಿರಿಯ ನಾಗರಿಕರ ಪಿಂಚಣಿ ಪರಿಶೀಲನೆಗೆ ಆಧಾರ್ ಕಾರ್ಡ್ ಅನಿವಾರ್ಯವಲ್ಲ. ಇನ್ನು ಪಿಂಚಣಿಗಾಗಿ ಜೀವಂತ ಪ್ರಮಾಣಪತ್ರ ಅಂದ್ರೆ ಲೈಫ್ ಸರ್ಟಿಫಿಕೇಟ್ ಪಡೆಯಲು ಪರ್ಯಾಯ ಐಡಿಗಳನ್ನ ಕೂಡ ನೀವು ಬಳಸಿಕೊಳ್ಳಬಹುದು. ಅದೇ ರೀತಿ ರೈಲ್ವೆ ರಿಯಾಯಿತಿಗಳು, ರೈಲ್ವೆ ಟಿಕೆಟ್ ಬುಕಿಂಗ್ ಅಥವಾ ರಿಯಾಯಿತಿಗಳನ್ನ ಪಡೆಯಲು ಆಧಾರ್ ಕಾರ್ಡ್ ಇನ್ಮುಂದೆ ಅಗತ್ಯವಿರುವುದಿಲ್ಲ.
ವೋಟರ್ ಐಡಿ(Voter ID) ಅಥವಾ ಪ್ಯಾನ್ ಕಾರ್ಡನ್ನ (Pan Card) ಮಾನ್ಯ ದಾಖಲೆಯಾಗಿ ಬಳಸಲು ಇದೀಗ ಅನುಮತಿ ನೀಡಲಾಗಿದೆ. ಇನ್ನು ಸರ್ಕಾರಿ ಪರೀಕ್ಷೆಗಳು ಅಥವಾ ವಿದ್ಯಾರ್ಥಿ ವೇತನಗಳು ಇನ್ನು ವಿದ್ಯಾರ್ಥಿಗಳು ಸರ್ಕಾರಿ ಪರೀಕ್ಷೆಗಳಿಗೆ ಅಥವಾ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯ ಅಲ್ಲ ಅಂತ ಹೇಳಿದೆ. ಶಾಲಾ ಕಾಲೇಜು ಐಡಿ ಅಥವಾ ಪ್ಯಾನ್ ಕಾರ್ಡ್ ಸಹ ಪರ್ಯಾಯವಾಗಿ ಇದಕ್ಕೆ ಬಳಸಿಕೊಳ್ಳಬಹುದು ಅಂತ ಇದೀಗ ಸರ್ಕಾರ ತಿಳಿಸಿದೆ. ಈ ಹೊಸ ಬದಲಾವಣೆಯು ಸಾರ್ವಜನಿಕರಿಗೆ ಹೆಚ್ಚಿನ ಸಹಕಾರಿಯನ್ನ ಒದಗಿಸುತ್ತದೆ. ಆಧಾರ್ ಕಾರ್ಡ್ ನವೀಕರಣ ಅಥವಾ ತಾಂತ್ರಿಕ ದೋಷಗಳಿಂದಾಗಿ ಕೆಲಸಗಳು ವಿಳಂಬವಾಗುತ್ತಿದ್ದರಿಂದ ಇದೀಗ ಈ ಪರಿಹಾರವನ್ನ ನೀಡಿದೆ.