Land Ownership Docs Rules : ಆಸ್ತಿಯ ಮಾಲಿಕತ್ವಕ್ಕೆ ಸಂಬಂಧಪಟ್ಟಂತೆ ಇದೀಗ ಕೋರ್ಟ್ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಆಸ್ತಿ ನೊಂದಣಿ ಮಾಡುವಾಗ ಕೇವಲ ನೊಂದಣಿ ಅಂದ್ರೆ ರಿಜಿಸ್ಟ್ರೇಷನ್ ಮಾಡಿಕೊಂಡರೆ ಸಾಲದು ಅದಕ್ಕಾಗಿ ಅಗತ್ಯ ದಾಖಲೆಗಳು ಮತ್ತೆ ಕಾನೂನು ಬದ್ದ ಸ್ವಾಧೀನವು ಅಷ್ಟೇ ಮುಖ್ಯ ಅಂತ ಹೇಳಿ ಇದೀಗ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನ ನೀಡಿದೆ. ಹಾಗಿದ್ರೆ ಏನು ಆ ನಿಯಮ ಈ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು ಅಂತ ತಿಳಿಯೋಣ.
ಆಸ್ತಿ ನೊಂದಣಿ ಕೇವಲ ಒಂದು ಪುರಾವೆ ಮಾತ್ರ. ಅದು ತನ್ನಿಂದ ತಾನೇ ಮಾಲೀಕತ್ವವನ್ನ ದೃಢಪಡಿಸುವುದಿಲ್ಲ. ಇನ್ನು ಆಸ್ತಿಯ ಮೇಲಿನ ನಿಜವಾದ ಹಕ್ಕನ್ನ ನಿರ್ಧರಿಸಲು ಕಾನೂನುಬದ್ಧವಾಗಿ ದಾಖಲೆಗಳು ಮತ್ತೆ ಅಧಿಕಾರಿಯುತ ಸ್ವಾಧೀನ ಅಗತ್ಯ ಅಂತ ಹೇಳಿ ಇದೀಗ ಕೋರ್ಟ್ ಒತ್ತಿ ಹೇಳಿರುವಂತಹದ್ದು. ಆಸ್ತಿಯ ಸ್ವಧೀನ ಕಾನೂನುಬದ್ದವಲ್ಲದಿದ್ದರೆ ನೊಂದಾಯಿತ ಪತ್ರವಿದ್ದರೂ ಕೂಡ ಅದು ಮಾಲೀಕತ್ವವನ್ನ ಖಚಿತಪಡಿಸುವುದಿಲ್ಲ. ಹಾಗಾಗಿ ಆಸ್ತಿಯ ಹಕ್ಕು ತನ್ನದೇ ಅಂತ ಹೇಳುವುದಕ್ಕೆ ಕೆಲವೊಂದು ದಾಖಲೆಗಳು ಪ್ರಮುಖವಾಗಿ ಬೇಕು ಎಂದು ಇದೀಗ ಕೋರ್ಟ್ ತಿಳಿಸಿದೆ.
ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕ ಮತ್ತೆ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳಲು ಇದೀಗ ಈ ದಾಖಲೆಗಳು ಹೊಂದಿರಬೇಕು ಎಂದು ಕೋರ್ಟ್ ತಿಳಿಸಿದೆ. ಹಾಗಾದ್ರೆ ಯಾವುದೆಲ್ಲ ದಾಖಲೆಗಳು ಬೇಕಾಗುತ್ತವೆ. ಮೊದಲನೇಯದಾಗಿ ಮಾರಾಟ ಪತ್ರ, ಸೇಲ್ ಡೀಡ್. ಇದು ಆಸ್ತಿ ಮಾರಾಟ ಮತ್ತು ವರ್ಗಾವಣೆಯನ್ನು ದೃಢೀಕರಿಸುವಂತಹ ಕಾನೂನು ದಾಖಲೆಯಾಗಿದೆ.
ಅದೇ ರೀತಿ ಮದರ್ ಡೀಡ್. ಆಸ್ತಿಯ ಮಾಲೀಕತ್ವದ ಇತಿಹಾಸವನ್ನ ಪತ್ತೆ ಹೆಚ್ಚುವಂತಹ ದಾಖಲೆ ಕೂಡ ಇದಾಗಿರುತ್ತದೆ. ಈ ದಾಖಲೆ ಕೂಡ ಮುಖ್ಯವಾಗಿ ಬೇಕು ಎಂದು ಕೋರ್ಟ್ ತಿಳಿಸಿದೆ. ಅದೇ ರೀತಿ ಸೇಲ್ ಅಂಡ್ ಪರ್ಚೇಸ್ ಅಗ್ರಿಮೆಂಟ್. ಮಾರಾಟದ ನಿಯಮಗಳು ಅದೇ ರೀತಿ ಶರತ್ತುಗಳನ್ನ ವಿವರಿಸುವಂತಹ ಈ ಒಪ್ಪಂದ ಪತ್ರ ಕೂಡ ಬೇಕು.
ಹಾಗೆಯೇ ಕಟ್ಟಡ ಅನುಮೋದನೆ ಯೋಜನೆ ಅಂದ್ರೆ ಬಿಲ್ಡಿಂಗ್ ಅಪ್ರೂವಲ್ ಪ್ಲಾನ್. ಸ್ಥಳೀಯ ಸಂಸ್ಥೆಗಳಿಂದ ಪಡೆದ ಕಟ್ಟಡ ನಿರ್ಮಾಣ ಅನುಮತಿಗಳು. ಇನ್ನು ಸ್ವಾಧೀನ ಪತ್ರ ಆಸ್ತಿಯನ್ನ ಸ್ವಾಧೀನ ಪಡಿಸಿಕೊಂಡಂತಹ ದಿನಾಂಕವನ್ನ ಇದು ದೃಢೀಕರಿಸುತ್ತದೆ. ಖಾತಾ ಪ್ರಮಾಣಪತ್ರ ಮತ್ತು ಹಂಚಿಕೆ ಪತ್ರ ಅಂದ್ರೆ ಆಸ್ತಿ ಮಾಲೀಕರ ಹೆಸರನ್ನ ಪುರಸಭೆ ಅನುಮೋದಿತ ನೊಂದಾಯಿಸುವ ಪತ್ರಗಳು ಕೂಡ ಬೇಕು.
ಇನ್ನು ಎನ್ಕಂಬರೆನ್ಸ್ ಸರ್ಟಿಫಿಕೇಟ್ ಆಸ್ತಿಯ ಮೇಲೆ ಯಾವುದೇ ಕಾನೂನು ವ್ಯಾಜ್ಯ ಅಥವಾ ಸಾಲಗಳಿಲ್ಲ ಅಂತ ದೃಢೀಕರಿಸುತ್ತದೆ. ಇನ್ನು ನಿರಾಕ್ಷೇಪನ ಪ್ರಮಾಣಪತ್ರ ಎನ್ಓಸಿ ಅಂದ್ರೆ ವಿವಿಧ ಇಲಾಖೆಗಳಿಂದ ಪಡೆದ ಅನುಮತಿಗಳು ಕೂಡ ಈ ಎಲ್ಲ ದಾಖಲೆಗಳು ಕೂಡ ಅಗತ್ಯವಾಗಿ ಇದ್ದರೆ ಮಾತ್ರ ಈ ಆಸ್ತಿ ನಿಮ್ಮದಾಗ್ತದೆ ಎಂದು ಕೋರ್ಟ್ ತೀರ್ಪು ನೀಡಿದೆ.