ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮತ್ತೆರಡು ಜಾಗದಲ್ಲಿ SIT ಗೆ ಮೂಳೆಗಳು ಪತ್ತೆ.!

Spread the love

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌಜನ್ಯಾ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡ ಪ್ರದೇಶದಲ್ಲಿ ಎಸ್‌ಐಟಿ(SIT) ನಡೆಸಿದ ಶೋಧ ಕಾರ್ಯಾಚರಣೆ ವೇಳೆ ರಾಶಿ ರಾಶಿ ಮಾನವನ ಮೂಳೆಗಳು ಪತ್ತೆಯಾಗಿದ್ದು, ಇದೀಗ ಮತ್ತಷ್ಟು ಮೂಳೆಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನೇತ್ರಾವತಿ ನದಿ ತೀರದ ಬಂಗ್ಲಗುಡ್ಡದ ದಟ್ಟ ಅರಣ್ಯದೊಳಗೆ ಎಸ್ಐಟಿ(SIT) ಅಧಿಕಾರಿಗಳು ಮಹಜರು ನಡೆಸಿದ್ದು, ಬೆಳಿಗ್ಗೆ ನಡೆಸಿದ ಶೋಧದ ವೇಳೆ ಒಂದು ಸ್ಥಳದಲ್ಲಿ ಮಾನವನ ಹಲವು ಮೂಳೆಗಳು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಎಸ್ ಐಟಿ ಅಧಿಕಾರಿಗಳು ಭೋಜನ ವಿರಾಮವನ್ನೂ ಪಡೆಯದೇ ನಿರಂತರ ಕಾರ್ಯಾಚರಣೆ ಮುಂದುವರೆಸಿದ್ದು ಮೂರು ತಂಡಗಳಾಗಿ ಎಸ್ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಈ ವೇಳೆ ಬಂಗ್ಲಗುಡ್ಡದ ಮತ್ತೆ ಎರಡು ಸ್ಥಳಗಳಲ್ಲಿ ಕೆಲ ಮೂಳೆಗಳು ಪತ್ತೆಯಾಗಿವೆ. ಮಾನವನ ಮೂಳೆಗಳು ಪತ್ತೆಯಾಗಿದ್ದು, ಮೂಳೆ ಹಾಗೂ ಸ್ಥಳದಲ್ಲಿರುವ ಮಣ್ಣನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಬಂಗ್ಲಗುಡ್ಡದ ಮೂರು ಕಡೆಗಳಲ್ಲಿ ಇಂದು ಹಲವು ಮೂಳೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಎಸ್ಐಟಿ(SIT) ಅಧಿಕಾರಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಸೋಕೋ ಟೀಂ ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದ್ದಾರೆ

WhatsApp Group Join Now

Spread the love

Leave a Reply