ಕೇವಲ ಒಂದು ಶೋಗಾಗಿ ಬೆಡ್ ಮೇಲೆ ಪುರುಷನೊಂದಿಗೆ ಮಲಗುವಷ್ಟು ನಾನು ಚೀಪ್ ಅಲ್ಲ – 1.65 ಕೋಟಿ ರೂ ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದೇನೆ ಎಂದ ನಟಿ

Spread the love

ಎರಡು ತಿಂಗಳ ಹಿಂದೆ ಅಳುವ ವಿಡಿಯೋ ಮೂಲಕ ಸುದ್ದಿಯಾಗಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ, ಕಳೆದ 11 ವರ್ಷಗಳಿಂದಲೂ ನನಗೆ ಬಿಗ್ ಬಾಸ್ ಆಫರ್ ಬಂದಿದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಬಾರಿ ಬಿಗ್‌ಬಾಸ್‌ಗಾಗಿ ರೂ. 1.65 ಕೋಟಿ ಆಫರ್ ಅನ್ನು ತಿರಸ್ಕರಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.

ಈ ನಿರಾಕರಣೆಗೆ ಕಾರಣ ತಿಳಿಸಿರುವ ತನುಶ್ರೀ, ಕೇವಲ ಒಂದು ರಿಯಾಲಿಟಿ ಶೋಗಾಗಿ ಒಂದೇ ಹಾಸಿಗೆ ಮೇಲೆ ವ್ಯಕ್ತಿಯೊಂದಿಗೆ ಮಲಗುವಷ್ಟು ನಾನು ಚೀಪ್ ಅಲ್ಲ ಎಂದಿದ್ದಾರೆ.

ಬಾಲಿವುಡ್ ಥಿಕನಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತನುಶ್ರೀ ದತ್ತಾ, “ನಾನು ಅಂತಹ ರಿಯಾಲಿಟಿ ಶೋಗೆ ಹೋಗುತ್ತೇನೆ ಎಂದು ನೀವು ಭಾವಿಸುತ್ತೀರಾ? ನಾನು ಅಂತಹ ಸ್ಥಳದಲ್ಲಿ ಉಳಿಯಲು ಸಾಧ್ಯವಿಲ್ಲ, ನಾನು ನನ್ನ ಸ್ವಂತ ಕುಟುಂಬದೊಂದಿಗೂ ಇಲ್ಲ ಎಂದರು.

ನನಗೆ ಬಿಗ್ ಬಾಸ್ ಬಗ್ಗೆ ಆಸಕ್ತಿ ಇಲ್ಲ. ಎಂದಿಗೂ ಇರಲ್ಲ. ಅವರು ನನಗೆ ಶೋನಲ್ಲಿ ಭಾಗವಹಿಸಲು ₹ 1.65 ಕೋಟಿ ಆಫರ್ ಮಾಡಿದ್ದಾರೆ. ನನ್ನ ಮಟ್ಟದ ಮತ್ತೋರ್ವ ಬಾಲಿವುಡ್ ಸೆಲೆಬ್ರಿಟಿಗೆ ಅಷ್ಟೇ ಹಣ ನೀಡಿದ್ದಾರೆ. ಬಿಗ್ ಬಾಸ್ ಸ್ಟೈಲಿಸ್ಟ್ ಕೂಡ ನನಗೆ ಕರೆ ಮಾಡಿ, ಕೇಳಿಕೊಂಡರು. ನನ್ನ ಡಯಟ್ ಬಗ್ಗೆ ಆರೈಕೆ ಮಾಡುತ್ತೇವೆ ಎಂದು ಹೇಳಿದ್ದರು. ಅವರು ನನಗೆ ನೆಮ್ಮದಿಂದ ಕೆಲಸ ಮಾಡಲು ಅವಕಾಶ ನೀಡಿದರೆ ನಾನು ಅದಕ್ಕಿಂತ ಹೆಚ್ಚಿನದನ್ನು ಗಳಿಸಬಹುದು ಎಂದು ನನಗೆ ತಿಳಿದಿದೆ ಎಂದರು.

ಪ್ರಸ್ತುತ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್‌ನ 19 ನೇ ಸೀಸನ್‌ನೊಂದಿಗೆ ಸಲ್ಮಾನ್ ಖಾನ್ ಮರಳಿದ್ದಾರೆ. ಸ್ಟ್ರೀಮಿಂಗ್ ಆದ ಒಂದೂವರೆ ಗಂಟೆಗಳ ನಂತರ ಕಲರ್ಸ್‌ನಲ್ಲಿ ಈ ಶೋ ಪ್ರಸಾರವಾಗುತ್ತದೆ.

WhatsApp Group Join Now

Spread the love

Leave a Reply