ನಟ ದರ್ಶನ್ ಅವರ ಅಭಿಮಾನಿಗಳೆಲ್ಲರೂ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಎಂದು ಗುನುಗುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ಹಾಡು ಟ್ರೆಂಡ್ ಆಗುತ್ತಿದೆ. ಒಂದೇ ದಿನದಲ್ಲಿ ಕೋಟ್ಯಂತರ ಬಾರಿ ವೀವ್ಸ್ ಆಗಿದೆ. ಈ ಗೀತೆಯ ಮೂಲಕ ‘ದಿ ಡೆವಿಲ್’ ಸಿನಿಮಾದ ಮೇಲಿನ ಹೈಪ್ ಹೆಚ್ಚುವಂತಾಗಿದೆ. ಆ ಕುರಿತು ಇಲ್ಲಿದೆ ಇನ್ನಷ್ಟು ಮಾಹಿತಿ..
ಭಾರಿ ನಿರೀಕ್ಷೆ ಮೂಡಿಸಿದ್ದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಆಗಸ್ಟ್ 24ರಂದು ಬಿಡುಗಡೆ ಆಯಿತು. ನಟ ದರ್ಶನ್ ಅವರ ಅಭಿಮಾನಿಗಳು ‘ದಿ ಡೆವಿಲ್’ (The Devil Movie) ಸಿನಿಮಾದ ಈ ಹಾಡಿನ ಮೇಲೆ ತುಂಬಾ ಭರವಸೆ ಇಟ್ಟುಕೊಂಡಿದ್ದರು. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದರ್ಶನ್ (Darshan) ಫ್ಯಾನ್ಸ್ ಮತ್ತೆ ಮತ್ತೆ ಈ ಹಾಡನ್ನು ನೋಡುತ್ತಿದ್ದಾರೆ. ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನೆಲ್ ಮೂಲಕ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ (Idre Nemdiyaag Irbek) ಹಾಡು ಬಿಡುಗಡೆ ಆಗಿದೆ. 24 ಗಂಟೆ ಕಳೆಯುವುದರಲ್ಲಿ ಈ ಹಾಡು ಒಂದು ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.
ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ಸಂಯೋಜನೆ ಆದ್ದರಿಂದ ಹಾಡುಗಳ ಮೇಲೆ ಜನರಿಗೆ ಇರುವ ನಿರೀಕ್ಷೆ ಅಪಾರ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಕೇಳಿ ದರ್ಶನ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ವಿಶೇಷವಾಗಿ ಈ ಹಾಡಿನಲ್ಲಿ ದರ್ಶನ್ ಅವರ ಗೆಟಪ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಕೆಲವರಿಂದ ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚೆನ್ನಾಗಿದೆ. ಆದರೆ ಸಾಹಿತ್ಯ ಕೊಂಚ ಡಲ್ ಆಯಿತು ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಿರುದ್ಧ ಶಾಸ್ತ್ರಿ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ‘ಪುಷ್ಪ’ ಸಿನಿಮಾ ಖ್ಯಾತಿಯ ಗಾಯಕ ದೀಪಕ್ ಬ್ಲೂ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಆ ಮೂಲಕ ಸಿನಿಮಾ ಮೇಲೆ ಇರುವ ಕ್ರೇಜ್ ಎಂಥದ್ದು ಎಂಬುದನ್ನು ಫ್ಯಾನ್ಸ್ ತೋರಿಸುತ್ತಿದ್ದಾರೆ. ಒಂದೇ ದಿನದಲ್ಲಿ 10 ಮಿಲಿಯನ್ಗಿಂತ ಅಧಿಕ ವೀವ್ಸ್ ಆಗಿದ್ದಕ್ಕೆ ಅಭಿಮಾನಿಗಳಿಗೆ ಸಂತಸ ಆಗಿದೆ.
ದರ್ಶನ್ ಅವರು ಸದ್ಯಕ್ಕೆ ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಪ್ರಮುಖ ಆರೋಪಿ. ಇತ್ತೀಚೆಗೆ ಜಾಮೀನು ರದ್ದಾದ ಕಾರಣ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಯಿತು. ದರ್ಶನ್ ಜೈಲಿನಲ್ಲಿ ಇದ್ದಾಗ ಈ ಹಾಡು ಬಿಡುಗಡೆ ಆಗಬೇಕಾದ ಪರಿಸ್ಥಿತಿ ಬಂತು ಎಂಬುದು ಅಭಿಮಾನಿಗಳ ಪಾಲಿನ ಬೇಸರದ ಸಂಗತಿ. ಈ ಸಿನಿಮಾಗೆ ಈಗಾಗಲೇ ಪ್ರಕಾರ ಕಾರ್ಯ ಆರಂಭಿಸಲಾಗಿದೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಆಗಲಿದೆ.

‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು 24 ಗಂಟೆಯಲ್ಲಿ ಪಡೆದ ವೀವ್ಸ್ ಎಷ್ಟು ಗೊತ್ತಾ.? ಡಿಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ಧಿ!
WhatsApp Group
Join Now