ಮೈಸೂರು: ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ (Lover) ಬಾಯಿಗೆ ಜಿಲೆಟಿನ್ (Gelatin) ಕಡ್ಡಿ ಇಟ್ಟು ಸ್ಫೋಟಿಸಿ ಹತ್ಯೆಗೈದ ಘಟನೆ ಸಾಲಿಗ್ರಾಮ ತಾಲೂಕಿನ ಬೇರ್ಯ ಗ್ರಾಮದಲ್ಲಿ ನಡೆದಿದೆ.
ಹುಣಸೂರು (Hunasuru) ತಾಲೂಕಿನ ಗೆರಸನಹಳ್ಳಿ ಗ್ರಾಮದ ರಕ್ಷಿತ (20) ಮೃತ ಮಹಿಳೆ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಕೊಲೆಗೈದ ಆರೋಪಿಯಾಗಿದ್ದಾನೆ. ರಕ್ಷಿತ ಕೇರಳದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಅಲ್ಲದೇ ಸಿದ್ದರಾಜು ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ತಿಳಿದುಬಂದಿದೆ.
ಮಹಿಳೆ ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂದು ಕರೆದಿದ್ದಳು. ಬಳಿಕ ಲಾಡ್ಜ್‍ನಲ್ಲಿ ಇಬ್ಬರು ತಂಗಿದ್ದರು. ಈ ವೇಳೆ, ಆಕೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಮೊಬೈಲ್ ಸ್ಫೋಟಗೊಂಡು ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದ.
ಸ್ಥಳದಲ್ಲಿ ಯಾವುದೇ ಮೊಬೈಲ್ ಇಲ್ಲದ ಕಾರಣ ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದಿತ್ತು. ಬ್ಲಾಸ್ಟ್ ಆದ ಮೊಬೈಲ್ ಎಲ್ಲಿ ಎಂದಿದ್ದಕ್ಕೆ ಹೊರಗೆ ಬಿಸಾಡಿದ್ದಾಗಿ ಸುಳ್ಳು ಹೇಳಿ ಪರಾರಿಯಾಗಲು ಯತ್ನಿಸಿದ್ದ. ಅನುಮಾನ ಬಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಬಳಿ ಅಸಲಿ ವಿಷಯವನ್ನು ಸಿದ್ದರಾಜು ಹೇಳಿದ್ದಾನೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಿಯತಮೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಹತ್ಯೆ : ಮೊಬೈಲ್ ಸ್ಫೋಟಗೊಂಡು ಸತ್ತಿದ್ದಾಳೆ ಎಂದು ಕಥೆ ಕಟ್ಟಿದ್ದ ಪ್ರಿಯಕರ ಅರೆಸ್ಟ್
WhatsApp Group
Join Now