ಟೀಮ್ ಇಂಡಿಯಾದ ಚೇಸ್ ಮಾಸ್ಟರ್, ದಾಖಲೆಗಳ ಸರದಾರ ಹಾಗೂ ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ಮಾಜಿ ನಾಯಕ ವಿರಾಟ್ ಕೊಹ್ಲಿಯ 10 ನೇ ತರಗತಿಯ ಅಂಕಪಟ್ಟಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸೋಮವಾರ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಪ್ರಕಟಿಸಿದರು. ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದಾಗಿನಿಂದ ಅವರ 10 ನೇ ತರಗತಿಯ ಅಂಕಪಟ್ಟಿ ವೈರಲ್ ಆಗುತ್ತಿದೆ.
ಕೊಹ್ಲಿ ನವದೆಹಲಿಯ ಪಶ್ಚಿಮ ವಿಹಾರ್‌ನಲ್ಲಿರುವ ಸೇವಿಯರ್ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದಾರೆ. ವಿರಾಟ್ ಕೊಹ್ಲಿ 10 ನೇ ತರಗತಿಯ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ 83 ಮತ್ತು ಸಮಾಜ ವಿಜ್ಞಾನದಲ್ಲಿ 81 ಅಂಕಗಳನ್ನು ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಕೆಲವು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಈ ಅಂಕಪಟ್ಟಿಯನ್ನು ಹಂಚಿಕೊಂಡಿದ್ದರು. “ನಿಮ್ಮ ಅಂಕಪಟ್ಟಿಗೆ ಕಡಿಮೆ ಸೇರಿಸುವ ವಿಷಯಗಳು ನಿಮ್ಮ ಪಾತ್ರಕ್ಕೆ ಹೇಗೆ ಹೆಚ್ಚಿನದನ್ನು ಸೇರಿಸುತ್ತವೆ ಎಂಬುದು ತಮಾಷೆಯಾಗಿದೆ” ಎಂದು ಕೊಹ್ಲಿ ಬರೆದಿದ್ದರು.

ರನ್ ಮೆಷಿನ್ ವಿರಾಟ್ ಕೊಹ್ಲಿ ‘SSLC’ ಮಾರ್ಕ್ಸ್ ಕಾರ್ಡ್ ವೈರಲ್..! ಪಡೆದ ಅಂಕ ಎಷ್ಟು ಗೊತ್ತಾ..?
WhatsApp Group
Join Now