ರೈತರಿಗೆ ಇದೀಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ರೈತರು ಬೆಳೆಯುವ ಪ್ರತಿಯೊಂದು ಬೆಳೆಗೂ ಬೆಂಬಲ ಬೆಲೆ ಎಂದು ನೀಡಲಾಗುತ್ತದೆ. ಆ ಪ್ರಕಾರ ಇದೀಗ ತೊಗರಿ ಬೆಳೆಗಾರರಿಗೆ (Dal Farmers) ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಘೋಷಿಸಿದೆ.
ರೈತರಿಗೆ ಬಂಪರ್ ಗಿಫ್ಟ್!
ಹೌದು, ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ಕೇಂದ್ರ ಸರ್ಕಾರದ ನಿಗಧಿತ ಬೆಂಬಲ ಬೆಲೆ ಜೊತೆಗೆ 450 ರೂ ಬೋನಸ್ ನೀಡುವುದಾಗಿ ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದುವರೆಗೆ ಕೇಂದ್ರ ಸರ್ಕಾರದಿಂದ ತೊಗರಿ ಬೆಳೆಗಾರರಿಗೆ 7,600 ರೂಪಾಯಿವರೆಗೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇದೀಗ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ತೊಗರಿಗೆ ಹೆಚ್ಚುವರಿಯಾಗಿ 450 ರೂಪಾಯಿ ಸಹಾಯಧನ ನೀಡುವುದಾಗಿ ಹೇಳಿದೆ.ಇನ್ನು ಈ ಬಗ್ಗೆ ಆಡಳಿತ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಬಜೆಟ್ ಆರಂಭದಲ್ಲೇ ಅನ್ನದಾತರಿಗೆ ಸಿಕ್ಕಿದ ಬಂಪರ್ ಸುದ್ದಿ!
ನರೇಂದ್ರ ಮೋದಿ (Narendra Modi) ನೇತೃತ್ವದ ಎನ್ಡಿಎ ಸರ್ಕಾರದ 2025ನೇ ಸಾಲಿನ ಬಜೆಟ್ (Budget 2025) ಮಂಡನೆಯಾಗುತ್ತಿದೆ. ಸುಮಾರು 1.4 ಶತಕೋಟಿ ದೇಶವಾಸಿಗಳ ಕಣ್ಣು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಬಜೆಟ್ ಮೇಲೆ ನೆಟ್ಟಿವೆ. ಬಜೆಟ್ ಆರಂಭದಲ್ಲೇ ಅನ್ನದಾತರಿಗೆ ಕೇಂದ್ರ ಸರ್ಕಾರ ಬಿಗ್ ಗಿಫ್ಟ್ ನೀಡಿದೆ ಅಂದ್ರೆ ತಪ್ಪಾಗಲ್ಲ. ಮೊದಲಿನಿಂದಲೂ ಕೇಂದ್ರ ಸರ್ಕಾರ ಅನ್ನದಾತರಿಗಾಗಿಯೇ ಸಾಕಷ್ಟು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಇದ್ರಲ್ಲಿ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆ. 3 ಲಕ್ಷದವರೆಗೂ ಇದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 5 ಲಕ್ಷದವರೆಗೂ ಹೆಚ್ಚಿಸಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
3 ಲಕ್ಷದಿಂದ 5 ಲಕ್ಷಕ್ಕೆ ಮಿತಿ ಹೆಚ್ಚಳ!
ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ಗಳು (ಕೆಸಿಸಿ) 7.7 ಕೋಟಿ ರೈತರು, ಮೀನುಗಾರರು ಮತ್ತು ಡೈರಿ ರೈತರಿಗೆ ಅಲ್ಪಾವಧಿಯ ಸಾಲಗಳನ್ನು ಸುಗಮಗೊಳಿಸುವುದನ್ನು ಮುಂದುವರಿಸುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಕೆಸಿಸಿ ಮೂಲಕ ಪಡೆಯುವ ಸಾಲದ ಸಾಲದ ಮಿತಿಯನ್ನು ₹ 3,000 ರಿಂದ ₹5,000 ಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
7.7 ಕೋಟಿ ಅನ್ನದಾತರಿಗೆ ಬಿಗ್ ರಿಲೀಫ್!
ಅನ್ನದಾತರಿಗೆ ತಕ್ಷಣ ಸಾಲ ನೀಡುವ ಯೋಜನೆಯೇ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ.ರೈತರು ತಮ್ಮ ಬೆಳೆಗಳನ್ನು ಕಟಾವು ಮಾಡಲು ಸಮಯಕ್ಕೆ ಹಣವನ್ನು ಪಡೆಯಲು ಸಹಾಯ ಮಾಡಲು ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.
ಯಾವುದೇ ಮೇಲಾಧಾರ ಬೇಕಿಲ್ಲ!
ಈ ಯೋಜನೆಯ ಮೂಲಕ ರೈತರು ಮೇಲಾಧಾರವಿಲ್ಲದೆ ಕೇವಲ 4 ಪ್ರತಿಶತ ಬಡ್ಡಿಯಲ್ಲಿ ಇನನ್ಮುಂದೆ 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಈ ಯೋಜನೆಯು ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಬದಲಾವಣೆಗಳನ್ನು ತರಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ರೈತರಿಗೆ ಬ್ಯಾಂಕ್ಗಳ ಮೂಲಕ ಸಾಲ ನೀಡಲು ಈ ಯೋಜನೆ ರೂಪಿಸಲಾಗಿದೆ. ರೈತರು ತಮ್ಮ ಕೃಷಿ ಅಗತ್ಯತೆಗಳು, ಕಾರ್ಯಾಚರಣೆಯ ವೆಚ್ಚಗಳು ಮತ್ತು ಇತರ ಕೃಷಿ ಅಗತ್ಯಗಳನ್ನು ಪೂರೈಸಲು ಈ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಪ್ರತ್ಯೇಕವಾಗಿ ಲಭ್ಯವಿದೆ. ಕೇಂದ್ರ ಸರ್ಕಾರ ಯಾವುದೇ ಗ್ಯಾರಂಟಿ ಇಲ್ಲದೇ ಈ ಯೋಜನೆಯನ್ನು ಜಾರಿಗೆ ತಂದಿದ್ದು, ರೈತರು ಬ್ಯಾಂಕ್ ಗೆ ಅಡಮಾನ ಅಥವಾ ಭದ್ರತಾ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.
ಆನ್ಲೈನ್ನಲ್ಲೇ ಸಿಗುತ್ತೆ ಸಾಲ.!
ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಸಾಲವನ್ನು ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ. ಮೊದಲು ನೀವು ಬಯಸಿದ ಬ್ಯಾಂಕ್ನ ಅಧಿಕೃತ ವೆಬ್ಸೈಟ್ಗೆ ಹೋಗಿ. ಅಲ್ಲಿ ಕಂಡುಬರುವ “ಕಿಸಾನ್ ಕ್ರೆಡಿಟ್ ಕಾರ್ಡ್” ಆಯ್ಕೆಯನ್ನು ಆರಿಸಿ ಮತ್ತು ನೀವು ಸಲ್ಲಿಸಿದ ನಂತರ, ನಿಮಗೆ ಅರ್ಜಿಯ ಉಲ್ಲೇಖದ ಸಂಖ್ಯೆಯನ್ನು ನೀಡಲಾಗುತ್ತದೆ.
- ಡಿಕೆಶಿ ಮಾಡಿದ ಸಹಾಯ ಮರೆಯೋಕೆ ಹೋಗಲ್ಲ – ಡಿಸಿಎಂ ಮೇಲೆ ರಾಜಣ್ಣ ಸಾಫ್ಟ್ ಕಾರ್ನರ್!
- ಸ್ಟ್ರೋಕ್ ಬರುವ ಮುನ್ನವೇ ದೇಹ ನೀಡುವ ಲಕ್ಷಣಗಳು : ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
- ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!
- ‘ರಾಹುಲ್ ಗಾಂಧಿ ಪ್ರಧಾನಿ ಮಾಡೋದೇ ಪ್ರಿಯಾಂಕಾ ಆಸೆ’ : ‘ಅವ್ರ ಆಸೆಯೇ ನಮ್ ಆಸೆ’ ಎಂದ ಕನಕಪುರ ಬಂಡೆ
- ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಸಿಮೆಂಟ್ ಲಾರಿ.! ಡಿಕ್ಕಿಯ ರಭಸಕ್ಕೆ ಹಳ್ಳಕ್ಕೆ ಉರುಳಿ ಬಿದ್ದ ಲಾರಿ
- ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್
- ಸುಖಾಂತ್ಯವಾಗಬೇಕಿದ್ದ ಯಾತ್ರೆ ದುರಂತ ಅಂತ್ಯ : ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿ!
- ರೈತರಿಗೆ ಭರ್ಜರಿ ಗುಡ್ ನ್ಯೂಸ್ : ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಲು 4 ಲಕ್ಷ ರೂ. ಸಬ್ಸಿಡಿ
- ಅನ್ನ ತಿಂದರೆ ತೂಕ ಹೆಚ್ಚುತ್ತಾ.? ಬಿಯರ್ನಿಂದ ಹೊಟ್ಟೆ ಉಬ್ಬುತ್ತಾ.? ಸತ್ಯವೇನು ಗೊತ್ತಾ.?
- Dina Bhavishya : ಡಿಸೆಂಬರ್ 24 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಸಿನಿಮಾ ಸ್ಟೈಲ್ನಲ್ಲಿ ಪತ್ನಿಯನ್ನು ಕೊಂದ ಗಂಡ; ಆತನಿಂದಲೇ ಆಸ್ಪತ್ರೆಗೆ ಸಾಗಿಸುವ ನಾಟಕ! ಆದರೆ ಕಟ್ಟಿದ ಕಥೆ ಕೇಳಿದ್ರೆ ಶಾಕ್!
- ಮಗುವಿಗೆ ಜನ್ಮ ನೀಡಿದ 10ನೇ ಕ್ಲಾಸ್ ವಿದ್ಯಾರ್ಥಿನಿ: ಶಾಲಾ ಬಸ್ ಡ್ರೈವರ್ನಿಂದಲೇ ನೀಚ ಕೃತ್ಯ
- ಹುಬ್ಬಳ್ಳಿ ಮರ್ಯಾದಾ ಹತ್ಯೆ ಮಾಸುವ ಮುನ್ನವೇ, ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಜಾತಿ ದ್ವೇಷಕ್ಕೆ ಬಲಿ!
- ಲಿವರ್ ಭಾಗದಲ್ಲಿ ಸೇರಿಕೊಂಡಿರುವ ಕೊಬ್ಬಿನಾಂಶವನ್ನು ಹೊರಹಾಕುವ ಪಾನೀಯವಿದು
- ಪತ್ನಿ ಕಸ್ಟಡಿಗೆ ಮಕ್ಕಳನ್ನು ಬಿಡಲು ಕೋರ್ಟ್ ಆದೇಶ : ಇಬ್ಬರು ಕಂದಮ್ಮಗಳಿಗೆ ವಿಷವುಣಿಸಿ ತಾಯಿ ಜೊತೆ ಪತಿ ಆತ್ಮಹತ್ಯೆ!
- ಲವರ್ ಜೊತೆ ಸೇರಿ ಗಂಡನನ್ನು ಕೊಂದು, ಮೃತದೇಹವನ್ನು ‘ಗ್ರೈಂಡರ್’ ನಲ್ಲಿ ರುಬ್ಬಿ, ಚರಂಡಿಗೆ ಎಸೆದ ಪತ್ನಿ!
- ಹಿಂದೂ ಮಹಿಳೆಯ ಸೆರಗು ಎಳೆಯುವ ಧೈರ್ಯ ನಿಮಗಿದೆಯೇ? : ನಿತೀಶ್ ಕುಮಾರ್ಗೆ ಜಾವೇದ್ ಅಖ್ತರ್ ಪ್ರಶ್ನೆ
- Arecanut Price : ಇಂದಿನ ಅಡಿಕೆ ಧಾರಣೆ : ಚೇತರಿಕೆ ಕಂಡಿತಾ ಅಡಿಕೆ ದರ : ಇಲ್ಲಿದೆ ಡಿಸೆಂಬರ್ 23ರ ದರಪಟ್ಟಿ
- ರಕ್ತನಾಳಗಳಲ್ಲಿ ಬ್ಲಾಕೇಜ್ ಇಲ್ಲದಿದ್ದರೂ ಕಾಡಬಹುದು ಹೃದಯಾಘಾತ! ಏನಿದು MINOCA? 2025ರಲ್ಲಿ ಈ ಪ್ರಕರಣಗಳು ಹೆಚ್ಚುತ್ತಿರುವುದು ಏಕೆ?
- ‘ಲವರ್’ ಜೊತೆ ಸೇರಿ ಪತಿಗೆ ನೇಣು ಬಿಗಿದು ಕೊಂದು ‘ಹೃದಯಾಘಾತ’ ಎಂದು ಬಿಂಬಿಸಿದ ಪಾಪಿ ಪತ್ನಿ.!
- ಮುಸ್ಲಿಂ ವೈದ್ಯೆಯ ನಕಾಬ್ ಎಳೆದ ಪ್ರಕರಣ : ಸಿಎಂ ನಿತೀಶ್ ಭಾವಚಿತ್ರಕ್ಕೆ ಚಪ್ಪಲಿ ಏಟು
- Horoscope Today : ಡಿಸೆಂಬರ್ 23 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಫೆಬ್ರವರಿ-ಮಾರ್ಚ್ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ : ಸಿಎಂ ಸಿದ್ದರಾಮಯ್ಯ ಘೋಷಣೆ
- ಡಿ ಕೆ ಶಿವಕುಮಾರ್ ಎಷ್ಟೇ ಯತ್ನಿಸಿದರೂ ನಾನು ಸಿದ್ದರಾಮಯ್ಯ ಪರ : ಮಾಜಿ ಸಚಿವ ಕೆ.ಎನ್ ರಾಜಣ್ಣ
- ಗಂಡ ಇಷ್ಟ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; ‘ಯಾರಿಗೆ ಬೇಕು ಈ ಲೋಕ’ವೆಂದು ಲೈವ್ನಲ್ಲಿ ನೇಣಿಗೆ ಶರಣಾದ ಗೃಹಿಣಿ!
- ನಾರ್ಮಲ್ ಕೊಲೆಸ್ಟ್ರಾಲ್ ಇದ್ದರೂ ಭಾರತೀಯರಲ್ಲಿ ಹೃದಯಾಘಾತ ಸಂಭವಿಸುವುದೇಕೆ.? ಇಲ್ಲಿದೆ ವೈದ್ಯರು ನೀಡುವ 5 ಆಘಾತಕಾರಿ ಕಾರಣಗಳು
- ಕೊಲೆಸ್ಟ್ರಾಲ್ ಹೆಚ್ಚಾಗಿದೆ ಅಂತ ಚಿಂತೆನಾ? ಈ ಒಂದು ಹಣ್ಣು ತಿಂದ್ರೆ ಸಾಕು ರಕ್ತದಲ್ಲಿರೋ LDL ಕಡಿಮೆಯಾಗುತ್ತೆ.!
- ಬೆಂಗಳೂರಲ್ಲಿ ಆಂಟಿ ಸಹವಾಸ ಬೇಡ ಅಂದ ಯುವಕನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ : ಮಹಿಳೆ ಅರೆಸ್ಟ್
- Horoscope Today : ಡಿಸೆಂಬರ್ 22 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : ಸೋಮವಾರದ 12 ರಾಶಿ ಭವಿಷ್ಯ ಇಲ್ಲಿದೆ
- ರಾಜ್ಯದಲ್ಲಿ ಮರ್ಯಾದಾ ಹತ್ಯೆ : ಅನ್ಯ ಜಾತಿ ಯುವಕನ ಜತೆ ಮದುವೆ : ಗರ್ಭಿಣಿ ಮಗಳನ್ನು ಕೊಂದ ಪಾಲಕರು
- ಅನ್ಯ ಧರ್ಮಿಯ ಜೊತೆ ಮದುವೆ : ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು






























