Crime News : ಸೊಸೆಯ ತಲೆ ಕತ್ತರಿಸಿದ ಮಾವ – ಆಗ್ರಾದಲ್ಲಿ ಭೀಕರ ಹತ್ಯೆ

Spread the love

Crime News : ಆಗ್ರಾದ ಕಿರಾವಳಿ ಪ್ರದೇಶದ ಮಲಿಕ್‌ಪುರ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ರಘುವೀರ್ ಸಿಂಗ್ ಎಂಬ ವ್ಯಕ್ತಿ ತನ್ನ ಸೊಸೆ ಪ್ರಿಯಾಂಕಳನ್ನು ಕೊಡಲಿಯಿಂದ ತಲೆ ಕತ್ತರಿಸಿ ಕೊಂದಿದ್ದಾನೆ. ಪ್ರಿಯಾಂಕ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ರಘುವೀರ್ ಸಿಂಗ್ ಕೊಡಲಿ ಹಿಡಿದು ಬಂದು ಆಕೆಯ ಮೇಲೆ ಹಲ್ಲೆ ಮಾಡಿದ್ದು, ಈ ಭೀಕರ ದಾಳಿಯಿಂದ ಪ್ರಿಯಾಂಕಳ ತಲೆ ದೇಹದಿಂದ ಬೇರ್ಪಟ್ಟಿತು.

WhatsApp Group Join Now

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಪ್ರಿಯಾಂಕಳ ಕಿರುಚಾಟ ಕೇಳಿ ಮನೆಯವರು ಸ್ಥಳಕ್ಕೆ ಧಾವಿಸಿ ಬಂದಿದ್ದು, ಅಲ್ಲಿ ಕಂಡ ದೃಶ್ಯ ಅವರನ್ನು ಬೆಚ್ಚಿಬೀಳಿಸಿದೆ. ಪ್ರಿಯಾಂಕಳ ತಲೆ ಮತ್ತು ದೇಹ ಬೇರೆ ಬೇರೆಯಾಗಿದ್ದು, ರಘುವೀರ್ ಸಿಂಗ್ ಕೈಯಲ್ಲಿ ಕೊಡಲಿ ಹಿಡಿದು ಹತ್ತಿರದಲ್ಲೇ ನಿಂತಿದ್ದ.

WhatsApp Group Join Now

ಬಳಿಕ ರಘುವೀರ್ ಸಿಂಗ್ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರಲ್ಲದೇ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

WhatsApp Group Join Now

ಮನೆಯಲ್ಲಿ ಬಹಳ ದಿನಗಳಿಂದ ಕುಟುಂಬ ಕಲಹ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಿಯಾಂಕಳ ಪತಿ ಗೌರವ್ ಫರುಕಾಬಾದ್ ಪೊಲೀಸರಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ನಿಯ ಸಾವಿನ ಸುದ್ದಿ ಕೇಳಿ ಅವರು ಕಂಗಾಲಾಗಿದ್ದಾರೆ. ಈ ಘಟನೆಯ ಬಗ್ಗೆ ಡಿಸಿಪಿ ಸೋನಂ ಕುಮಾರ್ ಮಾತನಾಡಿ, “ಮಾವ ಸೊಸೆಯನ್ನು ಕೊಂದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.


Spread the love

Leave a Reply