Registration Rate : ವಾಹನ ಸವಾರರಿಗೆ ಬರೆ ಎಳೆದ ರಾಜ್ಯ ಸರ್ಕಾರ – ವಾಹನ ಖರೀದಿಸುವವರಿಗೆ ಶಾಕ್ ಕಾದಿದೆಯಾ.?

Spread the love

Registration Rate : ವಾಹನ ಖರೀದಿಸುವವರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ‌ಹೌದು, ಹೊಸ ಕಾರು, ಬೈಕ್ ಖರೀದಿ ಮಾಡುವವರಿಗೆ ಫೆಬ್ರವರಿಯಿಂದ ನೋಂದಣಿ ಶುಲ್ಕ (ರಿಜಿಸ್ಟ್ರೇಷನ್) ತಲಾ 1000 ರೂ. ಹಾಗೂ 500 ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ. ಈಗಾಗಲೇ ಬೆಳಗಾವಿಯ ಅಧಿವೇಶನದಲ್ಲಿ ರಿಜಿಸ್ಟ್ರೇಷನ್ ಶುಲ್ಕ ಹೆಚ್ಚಳದ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಫೆಬ್ರವರಿಯಿಂದ ಪರಿಷ್ಕೃತ ದರ ಜಾರಿ ಆಗಲಿದೆ.

Subsidy for Farmer : ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್ ಕೊಡುಗೆ -ಕೇವಲ ₹265 ಗೆ ಸಿಗಲಿದೆ ಒಂದು ಚೀಲ ಯೂರಿಯಾ!

ಯೆಲ್ಲೋ ಬೋರ್ಡ್ ಚಾಲಕರ ಅಭಿವೃದ್ಧಿಗೆ ಬಳಕೆ:
ದರ ಹೆಚ್ಚಳದಿಂದ ಬಂದ ಹಣವನ್ನು ಯೆಲ್ಲೋ ಬೋರ್ಡ್ ಚಾಲಕರ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಇದಕ್ಕೆ ವಾಹನ ಮಾಲೀಕರು ಮಾತ್ರ ಗರಂ ಆಗಿದ್ದಾರೆ. ಈ ಹಣವನ್ನು ಚಾಲಕರ ಅಭಿವೃದ್ಧಿಗೆ ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ನಮ್ಮಿಂದ ಕಿತ್ತು ಅವರಿಗೆ ನೀಡುವುದು ಸರಿಯಲ್ಲ. ಸರ್ಕಾರವೇ ಅವರ ಕಲ್ಯಾಣಕ್ಕೆ ಹಣ ನೀಡಲಿ ಎಂದಿದ್ದಾರೆ.

ಇನ್ನು  ದರ ಹೆಚ್ಚಳ ಸಂಬಂಧ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಸದ್ಯ ವಾಹನ್ – 4 ನಲ್ಲಿ ಅಪ್ ಡೇಟ್ ಮಾಡಲಾಗುತ್ತಿದೆ‌. ಸಾರಿಗೆ ಇಲಾಖೆ ಸದ್ಯದಲ್ಲೇ ಅಂತಿಮ ಆದೇಶ ಹೊರಡಿಸಲಿದೆ. ಆದೇಶ ಹೊರಡಿಸಿದ ಬೆನ್ನಲ್ಲೇ, ರಾಜ್ಯದ ಎಲ್ಲಾ ಆರ್ಟಿಒಗಳಲ್ಲೂ ನೂತನ ರಿಜಿಸ್ಟ್ರೇಷನ್ ದರ ಜಾರಿ ಆಗಲಿದೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಈಗಾಗಲೇ ಸಾರಿಗೆ ಇಲಾಖೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದೆ. ಇದೀಗ ಮತ್ತೆ ಹೊಸ ಕಾರು, ಬೈಕ್ ಖರೀದಿ ಮಾಡುವವರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಹೊಸ ವರ್ಷದ ಆರಂಭದಲ್ಲಿಯೇ ಸಾರಿಗೆ ಇಲಾಖೆ ಬಸ್ ಟಿಕೆಟ್ ದರಗಳನ್ನು ಶೇಕಡಾ 15ರಷ್ಟು ಏರಿಕೆ ಮಾಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳ ಟಿಕೆಟ್ ದರ ಪರಿಷ್ಕರಣೆ ಮಾಡಿ ಜನರಿಗೆ ಶಾಕ್ ನೀಡಿದೆ. ಇದೀಗ ಕಾರು, ಬೈಕ್ ಖರೀದಿಸುವವರಿಗೂ ಶಾಕ್ ನೀಡಿದೆ.

WhatsApp Group Join Now

Spread the love

Leave a Reply