Instant Loan App : ನಮಸ್ಕಾರ ಸ್ನೇಹಿತರೇ, ಮೊಬೈಲ್ ಆ್ಯಪ್ ಲೋನ್ ದಂಧೆಗೆ ಅನೇಕ ಯುವಕ-ಯುವತಿಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕ್ರೈಮ್ ಬ್ರಾಂಚ್ ಪೊಲೀಸರೊಬ್ಬರ ಪ್ರಕಾರ ತಿಂಗಳಲ್ಲಿ ಇಂತಹ ಹತ್ತಾರು ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಮೊಬೈಲ್ ಆ್ಯಪ್‌ಗಳನ್ನು ಬಳಸಿಕೊಂಡು ಸುಲಭವಾಗಿ ಸಾಲ ನೀಡಿ ನಂತರ ಅವರಿಂದ ಡಬಲ್ ಹಣ ವಸೂಲಿ ಮಾಡುವ ಈ ಮೋಸದ ಜಾಲ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಮೊಬೈಲ್ ಬಳಕೆದಾರರು ಈ ಬಗ್ಗೆ ಎಚ್ಚರದಿಂದಿರಬೇಕು.
ಕೆಲವೊಮ್ಮೆ ತುರ್ತಾಗಿ 4-5 ಸಾವಿರ ರೂಪಾಯಿ ಕೈಸಾಲ ಬೇಕಾಗುತ್ತದೆ. ಗೆಳೆಯರಲ್ಲಿ ಕೇಳಿದಾಗ ಸಿಗುವುದಿಲ್ಲ. ಸಂಬಂಧಿಕರಲ್ಲಿ ಕೇಳಲು ಮುಜುಗರವಾಗುತ್ತದೆ. ಒಂದು ವಾರದಲ್ಲಿ ಹಿಂದಿರುಗಿಸುವ ಇಷ್ಟು ಸಣ್ಣ ಪ್ರಮಾಣದ ಸಾಲ ಬ್ಯಾಂಕುಗಳಲ್ಲೂ ದೊರೆಯುವುದಿಲ್ಲ. ತಕ್ಷಣ ಸಾಲ ಬೇಕಾಗಿರುವುದರಿಂದ ಯಾರ ರಗಳೆಯೂ ಬೇಡವೆಂದು ಆ್ಯಪ್‌ಗಳ ಮೊರೆ ಹೋಗುತ್ತಾರೆ.
Yashaswini Card : `ಯಶಸ್ವಿನಿ ಯೋಜನೆ’ ನೋಂದಣಿಗೆ ಜ.31ರವರೆಗೆ ಅವಕಾಶ.! ಬೇಕಾಗುವ ದಾಖಲೆಗಳೇನು.?
ಭಾರತದಲ್ಲಿ 600ಕ್ಕಿಂತ ಹೆಚ್ಚು ಲೋನ್ ಆ್ಯಪ್‌ಗಳಿವೆ. ಇವುಗಳಿಗೆ ಆರ್‌ಬಿಐ ಮಾನ್ಯತೆ ಇಲ್ಲ. ‘ಆನ್‌ಲೈನ್ ಲೋನ್ (Online Loan) ಎಂದು ಪ್ಲೇ ಸ್ಟೋರ್‌ನಲ್ಲಿ ಹುಡುಕಿದರೆ ರಾಶಿಗಟ್ಟಲೇ ಆ್ಯಪ್‌ಗಳು ಕಾಣಿಸಿಕೊಳ್ಳುತ್ತವೆ. ಈ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡುವಾಗ ನಿಮ್ಮ ಮೊಬೈಲ್ ನಂಬರ್, ಭಾವಚಿತ್ರ, ವಿಡಿಯೋ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಕೆಲಸ ಮಾಡುವಲ್ಲಿನ ಐಡೆಂಟಿಟಿ ಕಾರ್ಡ್ ಫೋಟೋ ಹೀಗೆ ನಿಮ್ಮಿಂದ ಹತ್ತಾರು ದಾಖಲಾತಿಗಳನ್ನು ಪಡೆದು, ಹಲವಾರು ನೀತಿ ನಿಯಮಗಳಿಗೆ ನಿಮ್ಮ ಒಪ್ಪಿಗೆ ಪಡೆದ ನಂತರ ಮೊಬೈಲ್‌ಗೆ ಇನ್ ಸ್ಟಾಲ್ ಆಗುತ್ತದೆ.
ಎಷ್ಟು ಮೊತ್ತದ ಸಾಲ ಸಿಗುತ್ತದೆ?
ತುರ್ತಾಗಿ ಕೈ ಸಾಲಗಳನ್ನು ಪಡೆಯುವ ಯುವಕರೇ ಈ ಆ್ಯಪ್’ಗಳ ಟಾರ್ಗೆಟ್. 3,000 ದಿಂದ 10,000 ರೂಪಾಯಿ ವರೆಗೆ ಸಾಲವನ್ನು ಈ ಆ್ಯಪ್‌ಗಳು ನೀಡುತ್ತವೆ. ಮೊದಲೇ ಎಲ್ಲ ದಾಖಲೆಗಳನ್ನು ನೀಡಿರುವ ಕಾರಣ ಸಾಲ ಪಡೆಯುವುದು ಸುಲಭ. ಪಡೆದ ಸಾಲಕ್ಕೆ ಆ ದಿನದಿಂದಲೇ ದಿನವಾರು ಲೆಕ್ಕದಲ್ಲಿ ಶೇ30ರಿಂದ 60ರಷ್ಟು ಬಡ್ಡಿಯನ್ನು ವಿಧಿಸಿ ಗೊತ್ತುಪಡಿಸಿದ ದಿನದೊಳಗೆ ಸಾಲ ಚುಕ್ತಾ ಮಾಡಲು ಹೇಳುತ್ತಾರೆ.
ದಿನಗಳು, ತಿಂಗಳುಗಳ ಲೆಕ್ಕಾಚಾರದಲ್ಲಿ ಸಾಲ ನೀಡಲಾಗುತ್ತದೆ. ಸಣ್ಣ ಪ್ರಮಾಣದ ಸಾಲಗಳನ್ನು ಹೆಚ್ಚೆಂದರೆ ಒಂದು ತಿಂಗಳ ಅವಧಿಗೆ ನೀಡಲಾಗುತ್ತದೆ. ಬಡ್ಡಿ ಲೆಕ್ಕಾಚಾರದ ವಿಧಾನಗಳಲ್ಲಿ ಆ್ಯಪ್‌ಗಳಿಂದ ಆ್ಯಪ್‌ಗಳಿಗೆ ವ್ಯತ್ಯಾಸವಿದೆ. ಶೇ.30ರಿಂದ ಶೇ.60ರಷ್ಟು ಬಡ್ಡಿಯನ್ನು ದಿನವಾರು ಲೆಕ್ಕಾಚಾರದಲ್ಲಿ ಹಾಕುತ್ತಾರೆ. ಸಾಮಾನ್ಯವಾಗಿ 5,000 ರೂಪಾಯಿ ಸಾಲ ಪಡೆದರೆ ಒಂದು ವಾರಕ್ಕೆ ರೂ.1500 ಬಡ್ಡಿ ಸೇರಿ ರೂ. 6500 ಅನ್ನು ಪಾವತಿಸಬೇಕಾಗುತ್ತದೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಹಣ ಪಾವತಿಸದಿದ್ದರೆ ಬ್ಲಾಕ್‌ಮೇಲ್
ಸಾಲ ಪಡೆಯುವ ಆರಂಭದಲ್ಲಿ ಬಡ್ಡಿಯ ಸರಿಯಾದ ಲೆಕ್ಕಾಚಾರವನ್ನು ಆಪ್‌ಗಳು ನೀಡುವುದಿಲ್ಲ. ನಂತರ ಪಡೆದ ಸಾಲಕ್ಕೆ ವಿಧಿಸುವ ಬಡ್ಡಿ ಮೊತ್ತವು ಅಸಲಿನಷ್ಟೇ ಬೆಳೆದಿರುವುದರಿಂದ ಸಾಮಾನ್ಯವಾಗಿ ಅಷ್ಟು ಮೊತ್ತವನ್ನು ತಕ್ಷಣ ಪಾವತಿಸಲು ಸಾಲಗಾರರು ಸಿದ್ಧರಿರುವುದಿಲ್ಲ. ಒಂದೆರಡು ದಿನ ತಡವಾದರೂ ಅದು ಅವರಿಗೆ ಲಾಭವೇ. ಆ ದಿನಗಳಿಗೂ ಬಡ್ಡಿ ವಿಧಿಸುತ್ತಾರೆ.
ಸಾಲ ಹಿಂತಿರುಗಿಸದೆ ಇದ್ದಲ್ಲಿ ‘ಕ್ರೆಡಿಟ್ ರೇಟ್’ (Credit Rate) ಕಡಿಮೆಯಾಗುತ್ತದೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ. ನಿಮ್ಮ ಮೊಬೈಲ್‌ಗಳಿಂದ ಚಿತ್ರಗಳನ್ನು ಕದ್ದು ಆಶ್ಲೀಲ ಚಿತ್ರಗಳಾಗಿ ಮಾರ್ಫಿಂಗ್ ಮಾಡಿ ಪರಿಚಯಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ. ಮುಂದುವರೆದು ಕೆಲವೊಮ್ಮೆನಕಲಿ ಎಫ್‌ಐಆರ್ ಪ್ರತಿಯನ್ನು ಕಳುಹಿಸುತ್ತಾರೆ. ಮುಂದೆ ನಿಮಗೆ ಯಾವ ಬ್ಯಾಂಕಿನಲ್ಲೂ ಸಾಲ ಸಿಗುವುದಿಲ್ಲ ಎಂದೂ ಹೆದರಿಸುತ್ತಾರೆ.
ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಅವರು ಹೆದರಿಸುವ ಪರಿ ಹೇಗಿರುತ್ತದೆಯೆಂದರೆ ಸಾಲ ಪಡೆದ ಶೇ.80ರಷ್ಟು ಮಂದಿ ಉಪಾಯವಿಲ್ಲದೆ ಅವರು ತಿಳಿಸುವಷ್ಟು ಮೊತ್ತವನ್ನು ಹಿಂದಿರುಗಿಸುತ್ತಾರಂತೆ. ಒಂದಷ್ಟು ಮಂದಿ ಅವರಿಗೆ ಹಣ ಪಾವತಿಸಲು ಕಷ್ಟವಾಗಿ ಆತ್ಮಹತ್ಯೆಯಂತಹ ಮೊರೆ ಹೋಗುತ್ತಾರೆ.
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ನಿರಂತರ ಟಾರ್ಚರ್.!
ಆನ್‌ಲೈನ್ ಸಾಲ ನೀಡುವ ಸಂಸ್ಥೆಗಳ ಟಾರ್ಚರ್ ಯಾವ ರೀತಿ ಇರುತ್ತದೆಯೆಂದರೆ ನೀವು ಒಮ್ಮೆ ಆನ್‌ಲೈನ್ ಸಾಲ ಪಡೆದರೆ ಮತ್ತೆ ಜೀವಮಾನದಲ್ಲಿ ಅಂತಹ ಸಾಲದ ಮೊರೆ ಹೋಗುವುದಿಲ್ಲ. ಆನ್‌ಲೈನ್ ಮೂಲಕ ಸಾಲ ಪಡೆದ ಯುವಕನೋರ್ವ ಹೇಳುವ ಪ್ರಕಾರ ಸಾಮಾನ್ಯವಾಗಿ ನಾಲ್ಕು ವಿಧದಲ್ಲಿ ಟಾರ್ಚರ್ ನೀಡುತ್ತಾರೆ. ಆನ್‌ಲೈನ್ ಸಾಲವನ್ನು ಪಡೆದ ಬಳಿಕ ನಿಗದಿತ ಕಂತಿನಂತೆ ಮೊತ್ತವನ್ನು ಪಾವತಿ ಮಾಡಬೇಕು.
ಒಂದು ವೇಳೆ ಪಾವತಿ ಮಾಡದಿದ್ದರೆ ಈ ಪಾರಂಭಿಕ ಹಂತದಲ್ಲಿ ಮೊಬೈಲ್ ಕರೆ ಮಾಡಿ ಸಾಲ ಕಟ್ಟಲು ಒತ್ತಡ ಹಾಕಲಾಗುತ್ತದೆ. ಎರಡನೇ ಹಂತದಲ್ಲಿ ಗೂಂಡಾಗಳಿಂದ ಕರೆ ಮಾಡಿ ಬೆದರಿಕೆ ಹಾಕಲಾಗುತ್ತದೆ. ಇದಾದ ಬಳಿಕವೂ ಕಟ್ಟದಿದ್ದಲ್ಲಿ ಮೂರನೆಯದಾಗಿ ಆ್ಯಪ್ ಮೂಲಕ ಸಾಲಗಾರನ ಹತ್ತಿರದ ಸಂಬAಧಿ, ಗೆಳೆಯ/ತಿಯರಿಗೆ ಕರೆ, ಸಂದೇಶ ಕಳುಹಿಸಿ ಹಣ ಕಟ್ಟಲು ಒತ್ತಡ ಹಾಕುತ್ತಾರೆ.
ನಾಲ್ಕನೇ ಆಸ್ತವಾಗಿ ಸಾಲಗಾರನ ಫೋಟೋ ಮೇಲೆ ‘ವಂಚಕ’ ಎಂಬ ಸಂದೇಶ ಹಾಕಿ ಫೇಸ್‌ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಒಡ್ಡುತ್ತಾರೆ. ಇದಕ್ಕೆ ಹೆದರಿ ಈ ಹಂತಗಳಲ್ಲಿ ಸಾಕಷ್ಟು ಮಂದಿ ಆತ್ಮಹತ್ಯೆಯ ಮೊರೆ ಹೋಗುತ್ತಾರೆ.
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಯುವಕರೇ ಎಚ್ಚರ!
ತಿಂಗಳ ವೇತನ ಪಡೆಯುವ 25-45 ವರ್ಷದ ಯುವಕ/ ಯುವತಿಯರೇ ಇವರ ಟಾರ್ಗೆಟ್. ಆದ್ದರಿಂದ ಇಂತಹ ಆ್ಯಪ್‌ಗಳ ಬಗ್ಗೆ ಜಾಗರೂಕರಾಗಿರಿ. ಈ ಲೇಖನವನ್ನು ಓದಿ ತಮಾಷೆಗೆಂದೂ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡದಿರಿ.
ಯಾವುದೇ ಆ್ಯಪ್‌ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಡೌನ್‌ಲೋಡ್ ಮಾಡಿಕೊಳ್ಳಬೇಡಿ. ಸಾಲ ಪಡೆದು ಸಮಸ್ಯೆಯಲ್ಲಿ ಸಿಲುಕದಿರಿ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದಂತೆ ಇಂತಹ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕುರಿತು ನಿಮಗೆ ಅರಿವಿರಲಿ.
- ಡ್ರಗ್ಸ್ ದಂಧೆ ಮಾಡುವ ವಿದೇಶಿಯರನ್ನು ಮುಲಾಜಿಲ್ಲದೆ ಅವರ ದೇಶಕ್ಕೆ ಕಳಿಸಿ : ಸಿಎಂ ಸಿದ್ದರಾಮಯ್ಯ ಸೂಚನೆ
- ಇ-ಆಫೀಸ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಕಲಬುರಗಿ ನಂಬರ್ ವನ್ : ಸಚಿವ ಪ್ರಿಯಾಂಕ್ ಖರ್ಗೆ
- ಮೂತ್ರ ಮಾಡುವ ಸಂದರ್ಭದಲ್ಲಿ ಉರಿ ಹಾಗೂ ದುರ್ವಾಸನೆ ಬರಲು ಕಾರಣ ಹಾಗೂ ಆಯುರ್ವೇದ ಪರಿಹಾರಗಳು
- ನಿಮ್ಮ ಮನೆಯ ವಿದ್ಯುತ್ ‘ಮೀಟರ್ ಬೋರ್ಡ್ ‘ನಲ್ಲಿ ‘ಕೆಂಪು ಲೈಟ್’ ಉರಿಯೋದು ಯಾಕೆ..? ಕಾರಣ ತಿಳಿಯಿರಿ
- ಜನ್ಮ ಕೊಟ್ಟ ತಂದೆಯನ್ನೇ ಕೊಂದು ಮೃತ ದೇಹವನ್ನು ಆಯಂಬುಲೆನ್ಸ್ನಲ್ಲಿ ಕಳಿಸಿದ ಮಗಳು
- ಕೊಲೆಸ್ಟ್ರಾಲ್ ಸಮಸ್ಯೆಯೇ? ಔಷಧಿ ಇಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಇಲ್ಲಿವೆ 8 ನೈಸರ್ಗಿಕ ಸೂತ್ರ
- ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?
- ‘SBI’ ಗ್ರಾಹಕರಿಗೆ ಬಿಗ್ ಶಾಕ್ : ATM ವಿತ್ ಡ್ರಾ ಮತ್ತು ‘ಬ್ಯಾಲೆನ್ಸ್ ಚೆಕ್’ ಶುಲ್ಕ ಹೆಚ್ಚಳ.!
- Arecanut Price : ಇಂದಿನ ಅಡಿಕೆ ಧಾರಣೆ – 17 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?
- ನಿಮ್ಮ ಖಾಸಗಿ ಫೋಟೋ-ವಿಡಿಯೋ ವೈರಲ್ ಆದ್ರೆ ಭಯ ಪಡಬೇಡಿ, ತಕ್ಷಣ ಇದೊಂದು ಕೆಲಸ ಮಾಡಿ
- ಹಲ್ಲು ಹುಳುಕು ನಿವಾರಣೆಗೆ ಇಲ್ಲಿವೆ ಸರಳ ಮನೆ ಮದ್ದುಗಳು
- ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ : ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ
- Horoscope Today : 17 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಗಂಡನ ಮೇಲಿನ ಕೋಪಕ್ಕೆ 4 ವರ್ಷದ ಮಗಳನ್ನೇ ಸಜೀವ ದಹನ ಮಾಡಲು ಮುಂದಾದ ತಾಯಿ ; ತಾನೂ ಬೆಂಕಿ ಹಚ್ಚಿಕೊಂಡು ಸಾವು!
- ಪುರುಷರಲ್ಲಿ ಪದೇ ಪದೇ ಮೂತ್ರ ವಿಸರ್ಜನೆ.. ಪ್ರಾಸ್ಟೇಟ್ ಕ್ಯಾನ್ಸರ್ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳಿವು
- ಒಂದೇ ಸ್ಥಳದಲ್ಲಿ ಕೂತ್ರೆ ದೇಹಕ್ಕೆ ಒಕ್ಕರಿಸುತ್ತೆ ಈ ಮಾರಕ ಕಾಯಿಲೆ.! ಕೂತರೂ ಕೂಡ ಪ್ರಾಣಕ್ಕೆ ಕಂಟಕ..!
- ಪತಿ ಮಾರಾಟ ಮಾಡಿದ ಆಸ್ತಿಯಿಂದ ಪತ್ನಿಗೆ ‘ಜೀವನಾಂಶ’ ಪಡೆಯುವ ಹಕ್ಕಿದೆ : ಹೈಕೋರ್ಟ್ ಮಹತ್ವದ ತೀರ್ಪು
- ಹಾಲಾಯ್ತು ಹಾಲಾಹಾಲ – ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಕೆ ಮಾಡ್ತಿದ್ದ ಖದೀಮರು ಅರೆಸ್ಟ್!
- ಮೊಬೈಲ್ ಬಳಕೆದಾರರೇ ಎಚ್ಚರ : ಕುತ್ತಿಗೆಯಲ್ಲೇ ‘ಬ್ಲೂಟೂತ್ ನೆಕ್ ಬ್ಯಾಂಡ್’ ಸ್ಪೋಟಗೊಂಡು ಯುವಕ ಸಾವು.!
- ಇವೇ ನೋಡಿ ಬ್ರೈನ್ ಸ್ಟ್ರೋಕ್ನ ಆರಂಭಿಕ ಲಕ್ಷಣಗಳು : ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ…
- ರೈತರಿಗೆ ಗುಡ್ ನ್ಯೂಸ್ : 20 ಕುರಿ 1 ಟಗರು ಸಾಕಲು ಸರ್ಕಾರದಿಂದ ಸಿಗಲಿದೆ ₹43,750 ಸಹಾಯಧನ! ಇಂದೇ ಅರ್ಜಿ ಹಾಕಿ
- Horoscope Today : 16 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಕೋಲಾರದ ನರ್ಸ್ ಸುಜಾತಾ ಮರ್ಡರ್ : 2 ಮಕ್ಕಳ ತಂದೆಯನ್ನು ಲವ್ ಮಾಡಿ ರಸ್ತೆ ಮಧ್ಯದಲ್ಲೇ ಹೆಣವಾದಳು.!
- ಪತ್ನಿಗೆ ವಂಚಿಸಿ ಟೆಕ್ಕಿ ಪತಿ ಅಕ್ರಮ ಸಂಬಂಧ : ಪ್ರೇಯಸಿ ಜೊತೆ ಪಲ್ಲಂಗದಲ್ಲಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ!
- ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ : ಸಿನಿಮಾ ಸ್ಟೈಲ್ನಲ್ಲಿ ನಡೀತು ಹತ್ಯೆ!
- ಪೋಷಕರೇ ಎಚ್ಚರ : ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು 3 ವರ್ಷದ ಬಾಲಕಿ ಸಾವು.!
- ಲೈಂಗಿಕ ಸಾಮರ್ಥ್ಯದ ಕೊರತೆಯ ಆತಂಕವೇ.? ಹೀಗ್ ಮಾಡಿದ್ರೆ ನಿಮ್ಮೆಲ್ಲಾ ಸಮಸ್ಯೆಗಳು ಮಾಯ..!
- ಅನ್ಯಕೋಮಿನ ಯುವಕನೊಂದಿಗೆ 3 ಮಕ್ಕಳ ತಾಯಿ ಲವ್ವಿಡವ್ವಿ : ಖಾಜಾನ ಪ್ರೀತಿಗೆ ಮನಸೋತು ಹೆಣವಾದಳು
- ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ : ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ
- ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅವರನ್ನೇ ಪಕ್ಷದವರು ಪಾಲಿಸ್ತಿದ್ದಾರೆ : ಮಾಜಿ ಸಂಸದ ಪ್ರತಾಪ್ ಸಿಂಹ
- ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಕಿಡ್ನಿ ಹಾಗೂ ಮೂಳೆಗಳಿಗೆ ಹಾನಿ ಜಾಸ್ತಿಯಂತೆ!
- 10 ಕೆಜಿ ತೂಕ ಇಳಿಸಿಕೊಳ್ಳಲು ಜೀರಿಗೆ ನೀರನ್ನ ಎಷ್ಟು ದಿನಗಳವರೆಗೆ ಕುಡಿಯಬೇಕು.?
- ಬಾಂಗ್ಲಾದೇಶಿಗರು ಕರ್ನಾಟಕಕ್ಕೆ ಹೇಗೆ ಬರ್ತಾರೆ, ಅಮಿತ್ ಶಾ ಕಡಲೆಕಾಯಿ ತಿನ್ನುತ್ತಿದ್ದರಾ? ಪ್ರಿಯಾಂಕ್ ಖರ್ಗೆ ವಾಗ್ದಾಳಿ
- ಒಂದೇ ಹೊಡೆತಕ್ಕೆ ಇಡೀ ಕುಟುಂಬವೇ ನಾಶ : ರಸ್ತೆ ಅಪಘಾತಕ್ಕೆ ಅತ್ತೆ, ಐವರು ಸೊಸೆಯಂದಿರು ಹಾಗೂ ಮಗಳು ಬಲಿ

































