Gruhalakshmi Scheme Updates : ‘ಕೈ’ ಕೊಟ್ಟ ಗೃಹಲಕ್ಷ್ಮಿ ಯೋಜನೆ ಹಣ.! ಕಾದು ಕುಳಿತ ಫಲಾನುಭವಿಗಳು ಕಂಗಾಲು – ಮುಂದೇನು.?

Gruhalakshmi Scheme Updates : ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಆಡಳಿತಕ್ಕೆ ಬರುವ ಮುಂಚೆಯೇ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು, ಅದರಂತೆ ಅಧಿಕಾರಕ್ಕೆ ಬಂದ ಕೂಡಲೇ ಹೇಳಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು. ಇದೀಗ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅದ್ಯಾಕೋ ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗುತ್ತಿದೆ.

ಇದನ್ನೂ ಕೂಡ ಓದಿ : Post Office FD : ಸ್ಥಿರ ಠೇವಣಿದಾರರಿಗೆ ಭರ್ಜರಿ ಸಿಹಿ ಸುದ್ದಿ, ಪೋಸ್ಟ್ ಆಫೀಸ್ನಲ್ಲಿ ಅದ್ಭುತ ಸ್ಕೀಮ್

WhatsApp Group Join Now

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅದ್ಯಾಕೋ ಗ್ರಹಣ ಹಿಡದಂತಾಗಿದೆ. ಯೋಜನೆ ಜಾರಿ ಮಾಡಿದಾಗಿನಿಂದಲೂ ಒಂದಿಲ್ಲೊಂದು ಅಡೆತಡೆಗಳು ಉಂಟಾಗುತ್ತಿದ್ದು, ಇದೀಗ ಮತ್ತೆ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಬರದೇ ಗೃಹಲಕ್ಷ್ಮಿಯರು ಬ್ಯಾಂಕಿಗೂ ಮನೆಗೂ ಪರದಾಡುತ್ತಿದ್ದಾರೆ. ಹೌದು, ಜುಲೈ, ಆಗಸ್ಟ್ ಮುಗಿದು ಸೆಪ್ಟೆಂಬರ್ ತಿಂಗಳ ಅಂತ್ಯಗೊಂಡರೂ ಗೃಹಲಕ್ಷ್ಮಿ ಹಣ ಮಾತ್ರ ಮಹಿಳೆಯರ ಬ್ಯಾಂಕ್ ಖಾತೆಯನ್ನ ಸೇರಿಲ್ಲ. ಇದು ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಇದಕ್ಕೆಲ್ಲಾ ಏನು ಕಾರಣ ಅಂತ ನೋಡುವುದಾದರೆ, ‘ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆಗಿಲ್ಲ. ಸದ್ಯ ಇಲಾಖೆಯಿಂದ ಮೂರು ತಿಂಗಳ ಕಂತಿನ ಹಣ‌ ಕೇಳಿದ್ದು, ಒಂದೊಂದೆ ತಿಂಗಳ ಹಣವನ್ನ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗೆ 2500 ಕೋಟಿ ಹಣ ಬೇಕಾಗುತ್ತದೆ. ಇನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮೂರು ತಿಂಗಳ ಅನುದಾನ ಅಂದರೆ ಒಟ್ಟು ₹7,500 ಕೋಟಿ ಹಣ ಬಿಡುಗಡೆಗೆ ಪತ್ರ ಬರೆದಿದ್ದು, ಸದ್ಯ ಈ ಹಣವೂ ಬಾಕಿ ಉಳಿದಿದೆ.

WhatsApp Group Join Now

ಇದನ್ನೂ ಕೂಡ ಓದಿ : Pension Scheme : ವಿಧವಾ ಪಿಂಚಣಿ’ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.! ಹೇಗೆ ಅರ್ಜಿ ಸಲ್ಲಿಸುವುದು.?

ಈ ತಿಂಗಳು ಗೃಹಲಕ್ಷ್ಮಿ ಹಣ ಬರೋದು ಡೌಟು.!

ಇನ್ನು ಪ್ರತಿ ತಿಂಗಳು 2500 ಕೋಟಿ ರೂ. ಗೃಹಲಕ್ಷ್ಮಿ ಹಣ ಬಿಡುಗಡೆ ಆಗಬೇಕು. ಆದ್ರೆ, ಇಲಾಖೆ ಹಣ ಬಿಡುಗಡೆ ಮಾಡದ ಕಾರಣ ಈ ತಿಂಗಳು ಗೃಹಲಕ್ಷ್ಮಿ ಹಣ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಬರುವುದು ಡೌಟ್ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ ತಿಂಗಳು ಬಂದಿತ್ತು. ಈ ತಿಂಗಳು ಜುಲೈ ತಿಂಗಳ ಹಣ ಬರುತ್ತೆ ಎಂದುಕೊಂಡವರಿಗೆ ಶಾಕ್ ಆಗಿದ್ದು, ಮುಂದಿನ ತಿಂಗಳಾದರೂ ಹಣ ಜಮಾ ಮಾಡುತ್ತಾರಾ.? ಕಾದುನೋಡಬೇಕಿದೆ.

WhatsApp Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply