Property Rule : ಮನೆ, ಜಮೀನು, ಪ್ಲಾಟ್ ಎಲ್ಲಾ ಆಸ್ತಿಗಳ ನೋಂದಣಿಗೆ 2 ದಾಖಲೆಗಳು ಕಡ್ಡಾಯ – ಮಾರಾಟ ಖರೀದಿಗೆ ಹೊಸ ರೂಲ್ಸ್.!

Property Rule : ರಾಜ್ಯದಾದ್ಯಂತ ಇನ್ನು ಮುಂದೆ ಯಾವುದೇ ಮನೆ ಅಥವಾ ಜಮೀನು ಅಥವಾ ಫ್ಲ್ಯಾಟ್ ಹೀಗೆ ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಆಸ್ತಿಗಳ ನೋಂದಣಿ ಮಾಡಿಕೊಳ್ಳಲು ಇನ್ನು ಮುಂದೆ ಈ ದಾಖಲೆಗಳನ್ನು ಸಲ್ಲಿಸುವುದು ಎಲ್ಲರಿಗೂ ಕಡ್ಡಾಯವಾಗಿದೆ. ಹಾಗಾಗಿ ಯಾರೇ ಆಗಲಿ ಇನ್ನು ಮುಂದೆ ಯಾವುದೇ ಆಸ್ತಿ ನೋಂದಣಿ ಮಾಡಿಕೊಳ್ಳಲು ದಾಖಲೆಗಳನ್ನ ಸಲ್ಲಿಸುವುದು ಕಡ್ಡಾಯವಾಗಿದೆ.

ಇದನ್ನೂ ಕೂಡ ಓದಿ : ಹೆಣ್ಣು ಮಗು ಇರುವ ಕುಟುಂಬಕ್ಕೆ ಗುಡ್ ನ್ಯೂಸ್.! ಸಿಗಲಿದೆ 22 ಲಕ್ಷ ರೂಪಾಯಿ! ಹೇಗೆ ಪಡೆಯುವುದು.? ಸಂಪೂರ್ಣ ಮಾಹಿತಿ

ರಾಜ್ಯದ ಕಂದಾಯ ಇಲಾಖೆಯಿಂದ ರಾಜ್ಯದಾದ್ಯಂತ ಇನ್ನು ಮುಂದೆ ಸಬ್ ರಿಜಿಸ್ಟರ್ ಆಫೀಸ್ ಗಳಿಗೆ ಹೋಗುವ ಮೊದಲು ಈ ದಾಖಲೆಗಳು ಇದ್ದರೆ ಮಾತ್ರ ನಿಮಗೆ ನಿಮ್ಮ ಆಸ್ತಿಗಳ ನೋಂದಣಿ ಆಗುತ್ತದೆ. ಈ ಬಗ್ಗೆ ಈಗಾಗಲೇ ರಾಜ್ಯದ ಕಂದಾಯ ಇಲಾಖೆ ಹಾಗೂ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಂದ ಇನ್ನು ಮುಂದೆ ಹೊಸ ನಿಯಮ ಜಾರಿಗೊಳಿಸಲಾಗಿದೆ.

ಆಸ್ತಿ ನೋಂದಣಿ ಮಾಡಿಕೊಳ್ಳುವವರಿಗೆ ರಾಜ್ಯ ಸರ್ಕಾರ ಹೊಸ ನಿಯಮವನ್ನ ಕಡ್ಡಾಯಗೊಳಿಸಿದ್ದು, ಇನ್ನು ಈ ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯಾರದ್ದೋ ಆಸ್ತಿಯನ್ನ ತನ್ನ ಆಸ್ತಿ ಎಂದು ವಂಚಿಸುವುದು, ನಕಲಿ ದಾಖಲೆ ನೀಡಿ ಆಸ್ತಿ ಕಬಳಿಸುವುದು ಇತ್ಯಾದಿ ವಂಚನೆಗಳ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಆಸ್ತಿ ನೋಂದಣಿ ನಿಯಮಾವಳಿಗಳಿಗೆ ಕೆಲವು ತಿದ್ದುಪಡಿಗಳನ್ನು ತಂದಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಕೂಡ ಓದಿ : Gold Rate : ಭಾರೀ ಇಳಿಕೆಯಾಯ್ತಾ ಚಿನ್ನದ ಬೆಲೆ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ರೇಟ್.?

ಇಂದಿನಿಂದ ಎಲ್ಲ ಆಸ್ತಿ ವಾರಸುದಾರರು ಉಪನೋಂದಣಿ ಕಚೇರಿಯಲ್ಲಿ ತಮ್ಮ ಪಾಸ್ಪೋರ್ಟ್, ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಈ ಮೂರು ದಾಖಲೆಗಳಲ್ಲಿ ಒಂದನ್ನ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಇನ್ನು ಆಸ್ತಿ ನೋಂದಣಿಗೆ ಸೆಪ್ಟೆಂಬರ್ 2 ರಿಂದ ಅನ್ವಯವಾಗುವಂತೆ ಆಯಾ ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಗೆ ತೆರಳಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಜನ ತಾವು ಖರೀದಿಸಿದ ಆಸ್ತಿಯನ್ನ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಹೀಗಾಗಿ ವಂಚನೆ ತಡೆಯಲು ಈ ನಿಯಮಗಳನ್ನ ಜಾರಿಗೆ ತರಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply