Crop Insuranace : ಬೆಳೆ ವಿಮೆ ನೋಂದಣಿ ಹೆಸರಲ್ಲಿ ರೈತರಿಗೆ ಭಾರೀ ಮೋಸ, ವಂಚನೆ.! ರೈತರೇ ಎಚ್ಚರ.!

Crop Insuranace : ನಮಸ್ಕಾರ ಸ್ನೇಹಿತರೇ, ಬೆಳೆ ವಿಮೆಯ ಹೆಸರಿನಲ್ಲಿ ರೈತರಿಗೆ ಭಾರೀ ಮೋಸ, ವಂಚನೆ.! ಬೆಳೆ ವಿಮೆ ನೊಂದಾಯಿಸುವ ರೈತರು ಆದಷ್ಟು ಈ ವಿಷಯವನ್ನು ನಿಮ್ಮ ಗಮನದಲ್ಲಿಟ್ಟುಕೊಳ್ಳಿ ಹಾಗು ನಿಮ್ಮ ರೈತ ಸ್ನೇಹಿತರಿಗೂ ತಿಳಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಈಗಾಗಲೇ ರೈತರಿಗೆ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಅರ್ಜಿಯನ್ನ ಈಗಾಗಲೇ ಆಹ್ವಾನಿಸಿದೆ.

ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?

WhatsApp Group Join Now

ಮುಂಗಾರು ಬೆಳೆ ವಿಮೆ ಪಾವತಿ ಕುರಿತು ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದ್ದು, ಪ್ರತಿಯೊಬ್ಬ ಅರ್ಹ ರೈತರು ಬೆಳೆ ವಿಮೆಯನ್ನು ನೊಂದಾಯಿಸಿಕೊಳ್ಳುವಾಗ ಈ ಕೆಳಗೆ ನೀಡಿರುವ ಉಪಯುಕ್ತ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆ ವಿಮೆಯನ್ನ ನೋಂದಾಯಿಸಿಕೊಳ್ಳಿ.

ಬೆಳೆ ವಿಮೆಯ ಹೆಸರಿನಲ್ಲಿ ಮುಗ್ದ ರೈತರಿಗೆ ವಂಚನೆ ಮಾಡುತ್ತಿರುವ ಸೈಬರ್ ಕಳ್ಳರು :-

ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ(PM Fasal Bima Yojana) ಅಡಿಯಲ್ಲಿ ಕರ್ನಾಟಕ ರೈತರಿಗೆ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ಈಗಾಗಲೇ ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. ಇದನ್ನು ಲಾಭವಾಗಿಸಿಕೊಂಡು ಸೈಬ‌ರ್ ಕಳ್ಳರು ಜಾಲತಾಣದಲ್ಲಿ ರೈತರಿಂದ ದುಡ್ಡು ಹೊಡೆಯಲು ಸಂಚು ಹಾಕುತ್ತಿದ್ದಾರೆ. ಇಂತಹ ಪ್ರಕರಣಗಳು ಅನೇಕ ಕಡೆ ಈಗಾಗಲೇ ನಡೆದಿದ್ದು, ರೈತರು ಬೆಳೆ ವಿಮೆಗೆ ನೊಂದಾಯಿಸಿಕೊಳ್ಳುವಾಗ ಈ ಕೆಳಗಿನ ಕೆಲವೊಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

WhatsApp Group Join Now

ಇದನ್ನೂ ಕೂಡ ಓದಿ : Anganwadi Recruitment 2024 : ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ! ಈ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

  • ಬೆಳೆ ವಿಮೆ ಪಾವತಿಸುವುದನ್ನು ಸರ್ಕಾರದ ಅಧಿಕೃತ ಜಾಲತಾಣದಿಂದ ಮಾತ್ರ ಪಾವತಿಸಿ.
  • ನಿಮ್ಮ ಮೊಬೈಲ್ ನಂಬರಿಗೆ ಕರೆ ಮಾಡಿ ಯಾರಾದರೂ ನಿಮಗೆ ಬೆಳೆವಿಮೆ ನೋಂದಾಯಿಸಿಕೊಡುತ್ತೇವೆ ಹಣ ಪಾವತಿಸಿ ಎಂದು ಕರೆ ಮಾಡಿದಾಗ ಯಾವುದೇ ಕಾರಣಕ್ಕೂ ಅವರ ಬ್ಯಾಂಕ್ ಖಾತೆಗೆ ನೀವು ಹಣವನ್ನ ವರ್ಗಾಯಿಸಬೇಡಿ.
  • ನಿಮ್ಮ ಮನೆಗೆ ಯಾರಾದರೂ ಭೇಟಿ ನೀಡಿ ನಿಮಗೆ ಬೆಳೆ ವಿಮೆ ಮಾಡಿಸಿ ಕೊಡುತ್ತೇವೆ ಎಂದು ಹಣ ಕೇಳಿದಾಗ ಯಾವುದೇ ಕಾರಣಕ್ಕೂ ಹಣ ನೀಡಬೇಡಿ.
  • ಇದರ ಬದಲಾಗಿ ನೀವು ನಿಮ್ಮ ಹತ್ತಿರದ ಗ್ರಾಮ ಒನ್ ಗ್ರಾಹಕ ಸೇವಾ ಕೇಂದ್ರಗಳಿಗೆ ಅಥವಾ ಕರ್ನಾಟಕ ಒನ್ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದು.
  • ರೈತ ಬಾಂಧವರು ಇಲ್ಲಿ ನೀಡಲಾದ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರದ ಅಧಿಕೃತ ಜಾಲತಾಣದಿಂದ ಮತ್ತು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಹಕ ಸೇವಾ ಕೇಂದ್ರಗಳಿಗೆ ಮಾತ್ರ ಭೇಟಿ ನೀಡಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ನೀವು ವಂಚನೆಗೆ ಒಳಗಾಗುವುದು ಖಚಿತ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now

Leave a Reply