ಪೋಷಕರೇ ಎಚ್ಚರ : ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು 3 ವರ್ಷದ ಬಾಲಕಿ ಸಾವು.!

Spread the love

ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು 3 ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಪುರಸಭೆಯ ಇಂದಿರಮ್ಮ ಕಾಲೋನಿಯಲ್ಲಿ ನಡೆದಿದೆ.

WhatsApp Group Join Now

ಛೇ..ನಿಜಕ್ಕೂಈ ಇಂತಹ ಘಟನೆಗಳು ನಡೆಯಬಾರದು. ಇಂತಹ ಘಟನೆಗಳು ನಡೆಯದಂತೆ ಪೋಷಕರು ಎಚ್ಚರ ವಹಿಸಬೇಕು. ಶತ್ರು ಕೂಡ ಇಂತಹ ಕಷ್ಟವನ್ನು ಎದುರಿಸಬಾರದು.ಬಾಲಕಿ ತಿಂಗಳುಗಟ್ಟಲೆ ಸಾವು ಬದುಕಿನ ನಡುವೆ ಹೋರಾಡಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

ಇಂದಿರಮ್ಮ ಕಾಲೋನಿಯ ಮುನಗಲ ಸಿಂಹಾದ್ರಿ ಮತ್ತು ಸರೋಜನಿ ದಂಪತಿಗಳು ಹಳೆಯ ಪಾತ್ರೆಗಳನ್ನು ವ್ಯಾಪಾರ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಅವರು ತಮ್ಮ ಮನೆಯಲ್ಲಿ ಯೇಸು ಕ್ರಿಸ್ತನಿಗಾಗಿ ಪ್ರಾರ್ಥನೆ ಮತ್ತು ಊಟವನ್ನು ಆಯೋಜಿಸಿದರು. ಆ ಸಮಯದಲ್ಲಿ, ಅವರ ಮೂರು ವರ್ಷದ ಮಗಳು ರಮ್ಯಾಶ್ರೀ ತಮ್ಮ ಮನೆಯ ಮೆಟ್ಟಿಲುಗಳ ಮೇಲೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಕೆಳಗೆ ಒಲೆಯ ಮೇಲೆ ಕುದಿಯುತ್ತಿದ್ದ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದಳು.

WhatsApp Group Join Now

ಮನೆಯಲ್ಲಿ ಯಾರೂ ಇದನ್ನ ಗಮನಿಸದೇ ಇದ್ದಾಗ.. ಇಡೀ ದೇಹಕ್ಕೆ ಸುಟ್ಟ ಗಾಯಗಳಾಗಿತ್ತು. ಕೂಡಲೇ ಮಗುವನ್ನು ತಕ್ಷಣ ಹೈದರಾಬಾದ್ನ ನೀನಿಲೋಫರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಮಗು ಸಾವನ್ನಪ್ಪಿತು. ಮನೆಯಲ್ಲಿ ಆಟವಾಡುತ್ತಾ, ಕುಣಿದು ಕುಪ್ಪಳಿಸುತ್ತಿದ್ದ ಮಗುವಿನ ಸಾವು ಸ್ಥಳೀಯರ ಕಣ್ಣಲ್ಲಿ ನೀರು ತರಿಸಿದೆ.


Spread the love

Leave a Reply