ರಾಜ್ಯದ ರೈತರಿಗೆ ಗುಡ್ ನ್ಯೂಸ್ : ₹1.50 ಲಕ್ಷ ಪಾವತಿಸಿ ಕೃಷಿ ಪಂಪ್‌ ಸೆಟ್ ಅಕ್ರಮ-ಸಕ್ರಮಕ್ಕೆ 3 ತಿಂಗಳ ಗಡುವು.!

Spread the love

ರಾಜ್ಯದಲ್ಲಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ಸರ್ಕಾರ ಮೂರು ತಿಂಗಳ ಕಾಲಾವಕಾಶ ನೀಡಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಅಕ್ರಮ ಸಂಪರ್ಕ ಹೊಂದಿರುವ ರೈತರು ₹1.50 ಲಕ್ಷ ಪಾವತಿಸಿ ತಮ್ಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಬಹುದು.

ಈ ಹಿಂದೆ ಮೂಲಸೌಕರ್ಯ ಒದಗಿಸಲು ₹4.50 ಲಕ್ಷ ಪಾವತಿಸಬೇಕಿತ್ತು. ಆದರೆ ರೈತರ ಹಿತದೃಷ್ಟಿಯಿಂದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ₹3 ಲಕ್ಷ ಕಡಿತಗೊಳಿಸಿ ಕೇವಲ ₹1.50 ಲಕ್ಷಕ್ಕೆ ಸಕ್ರಮಗೊಳಿಸಲು ನಿರ್ಧರಿಸಲಾಗಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲು ಸರ್ಕಾರ ವಾರ್ಷಿಕವಾಗಿ ₹24 ಸಾವಿರ ಕೋಟಿ ಸಬ್ಸಿಡಿ ನೀಡುತ್ತಿದೆ. ಇದರೊಂದಿಗೆ ‘ಗೃಹ ಜ್ಯೋತಿ’ ಯೋಜನೆಗಾಗಿ ವಾರ್ಷಿಕ ₹9 ಸಾವಿರ ಕೋಟಿ ಮೀಸಲಿಡಲಾಗಿದೆ.ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಒಟ್ಟು ₹42 ಸಾವಿರ ಕೋಟಿ ದೀರ್ಘಾವಧಿ ಸಾಲ ಹೊಂದಿವೆ. ಇದರಲ್ಲಿ ಬೆಸ್ಕಾಂ ಒಂದೇ ₹17,556 ಕೋಟಿ ಸಾಲದಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ವಿಧಾನಪರಿಷತ್ತಿನಲ್ಲಿ ಉತ್ತರಿಸಿದ ಸಚಿವರು, ಈ ರಿಯಾಯಿತಿ ದರದ ಸೌಲಭ್ಯವನ್ನು ಬಳಸಿಕೊಂಡು ರೈತರು ಕೂಡಲೇ ತಮ್ಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.

WhatsApp Group Join Now

Spread the love

Leave a Reply