ಜಮೀನಿನಲ್ಲಿ ಪಂಪ್ ಸೆಟ್ ಇರುವ ಎಲ್ಲಾ ರೈತರಿಗೆ | ಬಾವಿ, ಬೋರ್ವೆಲ್, ಕೊಳವೆ ಬಾವಿ ಹೊಂದಿರುವವರು ಈ ಕೆಲಸ ಮಾಡುವುದು ಕಡ್ಡಾಯ

ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಮತ್ತು ಸ್ವಂತ ಜಮೀನು ಮನೆ ಆಸ್ತಿ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೊಳಿಸಲಾಗಿದೆ. ಯಾವ ರೈತರ ಜಮೀನುಗಳಲ್ಲಿ ಕೃಷಿ ಪಂಪ್ ಸೆಟ್ ಇರುತ್ತದೆಯೋ, ಆ ರೈತರು ಈ ಕೆಲಸ ಮಾಡುವುದು ಕಡ್ಡಾಯ. ಹಾಗು ಇನ್ನು ಮುಂದೆ ಯಾವುದೇ ಆಸ್ತಿಗಳ ಮಾರಾಟ ಮತ್ತು ಖರೀದಿ ಮಾಡುವವರು ಇದ್ದರೆ ಎನಿವೇರ್ ರಿಜಿಸ್ಟ್ರೇಷನ್ (Anywhere Registration) ಜಾರಿ ಮಾಡಲಾಗಿದೆ.

ಇದನ್ನೂ ಕೂಡ ಓದಿ : ಹೆಣ್ಣು ಮಗು ಇರುವ ಕುಟುಂಬಕ್ಕೆ ಗುಡ್ ನ್ಯೂಸ್.! ಸಿಗಲಿದೆ 22 ಲಕ್ಷ ರೂಪಾಯಿ! ಹೇಗೆ ಪಡೆಯುವುದು.? ಸಂಪೂರ್ಣ ಮಾಹಿತಿ

ಯಾವ ರೈತರ ಜಮೀನುಗಳಲ್ಲಿ ಬಾವಿ ಅಥವಾ ಕೊಳವೆ ಬಾವಿ ಅಂದ್ರೆ ಬೋರ್‌ವೆಲ್ ಇದ್ದರೆ, ಈ ಕೆಲಸ ಮಾಡುವುದು ಕಡ್ಡಾಯವಾಗಿದೆ. ಇಲ್ಲ ಅಂದ್ರೆ ನಿಮಗೆ ದಂಡ ವಿಧಿಸಬಹುದು. ಜಮೀನು, ಮನೆ, ಫ್ಲ್ಯಾಟ್ ಹೀಗೆ ಯಾವ ಆಸ್ತಿಯು ಸಬ್ ರಿಜಿಸ್ಟರ್ ನಲ್ಲಿ ಆಗುತ್ತದೆಯೋ ಅಂತಹ ಎಲ್ಲ ಆಸ್ತಿಯ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ನೀಡಿದೆ. ಹಾಗಾದ್ರೆ ಕೃಷಿ ಪಂಪ್‌ಸೆಟ್ ಇರುವ ರೈತರು ಯಾವ ಕೆಲಸ ಮಾಡುವುದು ಕಡ್ಡಾಯ ಮತ್ತು ಆಸ್ತಿಗಳ ಮಾಲೀಕರಿಗೆ ರಾಜ್ಯ ಸರ್ಕಾರ ಅವರ ನೀಡಿರುವ ಬಂಪರ್ ಗಿಫ್ಟ್ ಏನು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

ಕೃಷಿ ನೀರಾವರಿ ಪಂಪಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‌ಸೆಟ್‌ನ ವಿದ್ಯುತ್ ಆರ್ ಆರ್ ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವಂತೆ ಸೂಚಿಸಲಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ 2024-25ನೇ ಸಾಲಿನಲ್ಲಿ ದರ ಪರಿಷ್ಕರಣೆ ಮಾಡುವ ಆದೇಶದಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಿದೆ. ಆದ್ದರಿಂದ ಎಸ್ಕಾಂಗಳು 10 ಎಚ್‌ಪಿ ಪಂಪ್‌ಸೆಟ್ ಹೊಂದಿರುವ ರೈತರ ಆಧಾರ್ ಸಂಖ್ಯೆ ಸಂಗ್ರಹ ಮಾಡ್ತಾ ಇದೆ.

ಇದನ್ನೂ ಕೂಡ ಓದಿ : Subsidy Scheme : ಮಹಿಳೆಯರಿಗೆ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ & ಸಾಲ  ಸೌಲಭ್ಯ.! ಯಾವ ಯೋಜನೆ.? ಸಂಪೂರ್ಣ ಮಾಹಿತಿ

ಖಾಲಿ ಇರುವ ಕೃಷಿ ಪಂಪ್‌ಸೆಟ್‌ನ ವಾರಸುದಾರರು ಮರಣ ಹೊಂದಿದ್ದಲ್ಲಿ ಪ್ರಸ್ತುತ ಪಹಣಿಯಲ್ಲಿರುವ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಹಿಂದಿನ ವಾರಸುದಾರ ಮರಣ ಪ್ರಮಾಣ ಪತ್ರ, ಛಾಪಾ ಕಾಗದ ಹಾಗು ಪಹಣಿಯಲ್ಲಿ ಖಾತೆಯಾಗಿದ್ದರೆ ಉಳಿದವರ ಒಪ್ಪಿಗೆ ಪತ್ರ ಕ್ರಯ ಪತ್ರದ ದಾಖಲೆಯನ್ನ ಸಮೀಪದ ಬೆಸ್ಕಾಂ ಶಾಖಾ ಕಚೇರಿ ಅಥವಾ ಸಂಬಂಧಿಸಿದ ಪವರ್ ಮ್ಯಾನ್ ಅಥವಾ ಮೀಟರ್ ರೀಡರ್‌ಗಳಿಗೆ ಸಲ್ಲಿಸಿ, ಹಾಲಿ ಆರ್ ಆರ್ ಸಂಖ್ಯೆಯಲ್ಲಿರುವ ಹೆಸರನ್ನ ಬದಲಾವಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇನ್ನು ಮುಂದೆ ನೀವು ಆಸ್ತಿ ನೋಂದಣಿಯನ್ನ ಎಲ್ಲಿಯಾದರೂ ಮಾಡಬಹುದು. ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಎನಿವೇರ್ ರಿಜಿಸ್ಟ್ರೇಷನ್ (Anywhere Registration) ನೋಂದಣಿ ವ್ಯವಸ್ಥೆಯನ್ನ ಸೆಪ್ಟೆಂಬರ್ ತಿಂಗಳಿನಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ. ವ್ಯಕ್ತಿ ತನ್ನ ಎಲ್ಲ ವ್ಯಾಪ್ತಿಯ ಯಾವುದೇ ಉಪನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿ ದಸ್ತಾವೇಜಿನ ನೋಂದಾಯಿಸಿಕೊಳ್ಳುವ ವ್ಯವಸ್ಥೆಗೆ ಹಾಗು ಸಬ್‌ರಿಜಿಸ್ಟಾರ್ ಕಚೇರಿ ಎದುರು ಜನರು ಕಾಯುವುದರಿಂದ ಮುಕ್ತಿ ನೀಡಲು ಹಾಗೂ ಕಚೇರಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ಎನಿವೇರ್ ರಿಜಿಸ್ಟ್ರೇಷನ್ (Anywhere Registration) ಜಾರಿಗೊಳಿಸಲಾಗಿದೆ.

ಇದನ್ನೂ ಕೂಡ ಓದಿ : Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಜನರು ತಮ್ಮ ಜಿಲ್ಲೆಯೊಳಗೆ ಯಾವುದೇ ನೋಂದಣಿ ಕಾರ್ಯಕ್ಕಾಗಿ ತಮ್ಮ ಆಯ್ಕೆಯ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಹೊರತುಪಡಿಸಿ ಆಸ್ತಿ ಮಾರಾಟಗಾರರು, ಖರೀದಿದಾರರು, ನ್ಯಾಯವ್ಯಾಪ್ತಿಯ ಉಪನೋಂದಣಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ರಾಜ್ಯದಲ್ಲಿರುವ 257 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೇವಲ 50 ಕಚೇರಿಗಳಲ್ಲಿ ವಿಪರೀತ ರಶ್ ಮತ್ತು ಸಿಬ್ಬಂದಿ ಕೆಲಸದ ಹೊರೆಯಿಂದಾಗಿ ಒತ್ತಡದಲ್ಲಿದ್ದಾರೆ. ಜನರು ತಮ್ಮ ಸರದಿಯನ್ನು ಕಾಯುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಈ ಹಿನ್ನಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply