ಹುಬ್ಬುಗಳು (Eyebrows) ಕಪ್ಪು ಹಾಗು ದಪ್ಪವಾಗಿ ಬೆಳೆಯಲು ಸೂಪರ್ ಮನೆಮದ್ದು
ಹುಬ್ಬುಗಳು (Eyebrows) ಕಪ್ಪು ಹಾಗು ದಪ್ಪವಾಗಿ ಬೆಳೆಯಲು ಸೂಪರ್ ಮನೆಮದ್ದು
ಹುಬ್ಬುಗಳು ಹಾಗು ಕಣ್ಣಿನ ರೆಪ್ಪೆ ಕಪ್ಪು ಹಾಗು ದಪ್ಪವಾಗಿ, ನೈಸರ್ಗಿಕವಾಗಿ ಬೆಳೆಸಿಕೊಳ್ಳಬೇಕು ಅಂದ್ರೆ ಈ ಮನೆಮದ್ದನ್ನ ಬಳಸಿ.
ಇದಕ್ಕೆ ಬೇಕಾಗಿರುವ ಪದಾರ್ಥಗಳು :- 1 ಸ್ಪೂನ್ ಅಲೋವೆರಾ ಜೆಲ್, 2 ಸ್ಪೂನ್ ಹರಳೆಣ್ಣೆ, ಹಾಗು 2 ವಿಟಮಿನ್ ಇ ಕ್ಯಾಪ್ಸೂಲ್
ಒಂದು ಬೌಲ್ ಗೆ ಅಲೋವೆರಾ ಜೆಲ್, ಹರಳೆಣ್ಣೆ ಹಾಗು ವಿಟಮಿನ್ ಇ ಕ್ಯಾಪ್ಸೂಲ್ ಇಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದನ್ನು ನೀವು ಒಂದು ಬಾಕ್ಸ್ ಗೆ ಹಾಕಿ 10 ದಿನಗಳವರೆಗೆ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.
ರಾತ್ರಿ ಮಲಗುವ ಮುನ್ನ ಮುಖ ತೊಳೆದು ನಂತರ ಇದನ್ನು ಕಣ್ಣಿನ ರೆಪ್ಪೆ ಹಾಗು ಹುಬ್ಬುಗಳಿಗೆ ಹಚ್ಚಿ 2-3 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ
ರಾತ್ರಿ ಹಾಗೆ ಬಿಟ್ಟು ಬೆಳಿಗ್ಗೆ ಎದ್ದು ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.
ಇದನ್ನು ಪ್ರತಿದಿನ ರಾತ್ರಿ ಹಚ್ಚುತ್ತಾ ಬನ್ನಿ, ನಿಮ್ಮ ಕಣ್ಣಿನ ರೆಪ್ಪೆ ಹಾಗು ಹುಬ್ಬುಗಳು ಕಪ್ಪು ಮತ್ತು ದಪ್ಪವಾಗಿ ಬೆಳೆಯುತ್ತದೆ.