ರಚಿತಾ ರಾಮ್ ಅದ್ಭುತ ನೋಟಕ್ಕೆ ಅಭಿಮಾನಿಗಳು ಫಿದಾ! ಬುಲ್ ಬುಲ್ ಮಾತಾಡಕ್ಕಿಲ್ವಾ ಎಂದ ಫ್ಯಾನ್ಸ್!
ಬುಲ್ ಬುಲ್ ರಚಿತಾ ರಾಮ್ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇವುಗಳನ್ನ ನೋಡಿದ ಫ್ಯಾನ್ಸ್ ತುಂಬಾನೆ ಖುಷಿಪಟ್ಟಿದ್ದಾರೆ. ಶುಕ್ರವಾರದ ಕಮಲ ದೇವತೆ ಅಂತಲೂ ಬಣ್ಣಿಸಿದ್ದಾರೆ. ರಚಿತಾ ರಾಮ್ ಈ ಫೋಟೋಗಳ ಸುತ್ತ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಬುಲ್ ಬುಲ್ ರಚಿತಾ ರಾಮ್ ಒಂದಷ್ಟೂ ಫೋಟೋ ಶೇರ್ ಮಾಡಿದ್ದಾರೆ. ಮಸ್ಟರ್ಡ್ ಕಲರ್ ಸೀರೆಯುಟ್ಟ ಈ ಫೋಟೋಗಳಲ್ಲಿ ಅದ್ಭುತ ಅನಿಸೋ ನೋಟವನ್ನು ಬೀರಿದ್ದಾರೆ. ತಮ್ಮ ಎಂದಿನ ಹೇರ್ ಸ್ಟೈಲ್ ಅಲ್ಲೂ ಕಂಗೊಳಿಸಿದ್ದಾರೆ. ಈ ಎಲ್ಲವೂಗಳನ್ನ ನೋಡಿದ ಫ್ಯಾನ್ಸ್ ಶುಕ್ರವಾರದ ಕಮಲ ದೇವತೆ ಅಂತಲೇ ಬಣ್ಣಿಸಿದ್ದಾರೆ.
ರಚಿತಾ ಅಭಿಮಾನಿಗಳು ಈ ರೀತಿ ಕರೆಯಲು ಕಾರಣ ಕೂಡ ಇದೆ. ಆ ಕಾರಣ ಏನು ಗೊತ್ತೇ ? ಹೌದು, ರಚಿತಾ ರಾಮ್ ತಮ್ಮ ಈ ಫೋಟೋಗಳನ್ನ ಶುಕ್ರವಾರದ ದಿನವೇ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೇನೆ ರಚ್ಚು ಸೆಲೆಬ್ರಿಟಿಗಳು ರಚಿತಾ ರಾಮ್ ಅವರನ್ನ ಶುಕ್ರವಾರದ ಕಮಲ ದೇವತೆ ಅಂತಲೂ ಹೊಗಳಿದ್ದಾರೆ.
ರಚಿತಾ ರಾಮ್ ಮಾಡ್ರನ್ ಡ್ರೆಸ್ ಅಲ್ಲಿ ಅಷ್ಟೇನೂ ಸೂಪರ್ ಅನಿಸೋದಿಲ್ಲ. ಆದರೆ, ಸೀರೆ ಅಂತ ಬಂದ್ರೆ ರಚ್ಚುಗೆ ರಚ್ಚುನೇ ಸಾಟಿ ನೋಡಿ. ಅಷ್ಟು ವಿಶೇಷವಾಗಿಯೇ ಕಾಣಿಸುತ್ತಾರೆ. ಒಳ್ಳೆ ಹೈಟ್ ಕೂಡ ಇರೋದ್ರಿಂದಲೇ ಸೀರೆಗಳು ರಚಿತಾ ರಾಮ್ ಅವರಿಗೆ ತುಂಬಾನೆ ಚೆನ್ನಾಗಿಯೇ ಒಪ್ಪುತ್ತೆ ಬಿಡಿ.
ರಚಿತಾ ರಾಮ್ ಅವರ ಸೀರೆ ಸೌಂದರ್ಯಕ್ಕೋ ಅಥವಾ ಹಾಡು ಬರೆದ್ಮೇಲೆ ಸೀರೆ ಪ್ಲಾನ್ ಮಾಡಿದ್ರೋ ಗೊತ್ತಿಲ್ಲ. ಆದರೆ, ರನ್ನ ಚಿತ್ರದ ಸೀರೆಲಿ ಹುಡುಗಿಯ ನೋಡಲೇ ಬಾರದು ಅಂತ ಹಾಡು ಬಂದೆ ಬಿಡ್ತು. ಡೈರೆಕ್ಟರ್ ಯೋಗರಾಜ್ ಭಟ್ ಈ ಒಂದು ಹಾಡನ್ನ ಬರೆದುಕೊಟ್ಟರು. ಗಾಯಕ ವಿಜಯ್ ಪ್ರಕಾಶ್ ಇದನ್ನ ಹಾಡಿದರು. ವಿ.ಹರಿಕೃಷ್ಣ ಸಂಗೀತದಲ್ಲಿಯೇ ಈ ಗೀತೆ ಸೂಪರ್ ಹಿಟ್ ಆಗಿತ್ತು.
ರನ್ನ ಚಿತ್ರದ ಈ ಒಂದು ಹಾಡಿನಲ್ಲಿ ರಚಿತಾ ರಾಮ್ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದರು. ವಿಶೇಷವಾಗಿಯೇ ಸೀರೆಯಲ್ಲಿ ಕಂಡು ಎಲ್ಲರ ದಿಲ್ ಕದ್ದು ಬಿಟ್ಟರು. ಈ ಒಂದು ಹಾಡಿನಲ್ಲಿ ರಚಿತಾ ಅವರನ್ನ ನೋಡಿಯೇ ಕಿಚ್ಚ ಸುದೀಪ್ ಹಾಗೂ ಚಿಕ್ಕಣ್ಣ ಸೀರೆಲಿ ಹುಡುಗಿಯ ನೋಡಲೇ ಬಾರದು ಅಂತಲೇ ಹಾಡಿದ್ದರು.