ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರನ್ನು ಕುಡಿಯುವುದರ ಅದ್ಬುತ ಪ್ರಯೋಜನಗಳು

ಏಲಕ್ಕಿಯಲ್ಲಿ ಮೆಗ್ನೇಷಿಯಂ ಮತ್ತು ಪೊಟ್ಯಾಶಿಯಂ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ ಹಾಗು ಹೈಪೋಲಿ ಪಿಡೆಮಿಕ್ ಎನ್ನುವ ನೈಸರ್ಗಿಕ ಸಂಯುಕ್ತ ಅಂಶ ಸಮೃದ್ಧವಾಗಿದೆ.

ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಪಿರಿಯಡ್ಸ್ ಸಮಯದಲ್ಲಿ ಬರುವ ಹೊಟ್ಟೆ ನೋವನ್ನ ನಿವಾರಿಸುತ್ತದೆ. ಹಾಗು ಮೂತ್ರನಾಳದ ಸೋಂಕನ್ನು ತಡೆಯುತ್ತದೆ.

ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ನಿಮ್ಮ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಳ್ಳುತ್ತದೆ ಮತ್ತು ಬಾಯಿಯ ದುರ್ವಾಸನೆ ತಡೆಯಲು ಸಹಾಯ ಮಾಡುತ್ತದೆ.

ಏಲಕ್ಕಿಯು ವಾಂತಿ-ನಿರೋಧಕ ಗುಣಗಳನ್ನು ಹೊಂದಿವೆ. ಇದು ಸೌಮ್ಯವಾದ ವಾಂತಿ ಮತ್ತು ವಾಕರಿಕೆಗೆ ಸಹಾಯ ಮಾಡುತ್ತದೆ.

ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕುವ ಮೂಲಕ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಗ್ಯಾಸ್, ಅಸಿಡಿಟಿ ಹಾಗು ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ. ಜೊತೆಗೆ ಹೊಟ್ಟೆ ಹಗುರಾಗುತ್ತದೆ.