ಮೂರು – ನಾಲ್ಕು ಬಾರಿ ನಾನು ಸತ್ತೇ ಹೋಗಬೇಕಿತ್ತು – ರಿಷಭ್ ಶೆಟ್ಟಿ ಹೀಗೆ ಹೇಳಿದ್ದು ಯಾಕೆ.? Kantara Chapter 1

Spread the love

Kantara Chapter 1 : ಮೂರು ನಾಲ್ಕು ಬಾರಿ ನಾನು ಸತ್ತೆ ಹೋಗಬೇಕಿತ್ತು ಆ ಮಟ್ಟಿಗೆ ತೊಂದರೆಯಾಗಿದೆ ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆನೇ ಮಾಡಿಲ್ಲ ಎಲ್ಲರೂ ನಮ್ಮ ಸಿನಿಮಾ ಅಂತ ಕೆಲಸ ಮಾಡಿದರು. ಈ ವೇಳೆ ಸಾಕಷ್ಟು ತೊಂದರೆಗಳನ್ನ ಎದುರಿಸಿದ್ದೇವೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಟನೆ ಮಾಡಿರುವ ಕಾಂತಾರ ಫ್ರೀಕ್ವೆಲ್ ಸಿನಿಮಾದ ಟ್ರೈಲರ್ ನ್ನು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಟ್ರೈಲರ್ ಅದ್ದೂರಿಯಾಗಿದ್ದು, ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರು ಕಣ್ಣಿಗೆ ಕುಕ್ಕುವಂತೆ ಅಭಿನಯ ಮಾಡಿದ್ದಾರೆ.

WhatsApp Group Join Now

ಸದ್ಯ ಈ ಎಲ್ಲದರ ಮಧ್ಯೆ ಕಾಂತಾರ ತಂಡ ಫ್ರೀಕ್ವೆಲ್ ಸಿನಿಮಾದ ಬಳಿಕ ಇದೇ ಮೊದಲ ಸಲ ಮಾಧ್ಯಮ ಗೋಷ್ಠಿ ನಡೆಸಿದೆ. ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಸಿನಿಮಾದ ಎಲ್ಲಾ ಹಾಡುಗಳನ್ನ ರಿಲೀಸ್ ಮಾಡುತ್ತೇವೆ. ಸ್ವಲ್ಪ ತಡ ಆಗುತ್ತೆ, ಪ್ಯಾನ್ ಇಂಡಿಯಾ ಮೂವಿ ಆಗಿದ್ದರಿಂದ ಕೆಲಸ ತುಂಬಾ ಇದೆ. ಮ್ಯೂಸಿಕ್ ಡೈರೆಕ್ಟರ್ ಕೆಲಸ ಇನ್ನು ಇದೆ. ಹೀಗಾಗಿ ಇಲ್ಲಿಗೆ ಅವರು ಬಂದಿಲ್ಲ. ಈಗಾಗಲೇ ನನ್ನ ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳು ಆಗಿವೆ. ಊರಲ್ಲಿ ಇದ್ದು ಸಿನಿಮಾ ಮಾಡಿ ಮುಗಿಸಿದ್ದೇವೆ. ಇದೀಗ ಫಸ್ಟ್ ಟೈಮ್ ಬೆಂಗಳೂರಿಗೆ ಈ ಕಾಂತಾರ ಬಂದಿದೆ ಎಂದು ಹೇಳಿದ್ದಾರೆ.

ಮಾತನಾಡುವಾಗ ಭಾವುಕರಾದ ರಿಷಬ್ ಶೆಟ್ಟಿ ಅವರು ಮೂರು ನಾಲ್ಕು ಬಾರಿ ನಾನು ಸತ್ತೆ ಹೋಗಬೇಕಿತ್ತು ಆ ಮಟ್ಟಿಗೆ ತೊಂದರೆ ಆಗಿದೆ. ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆನೇ ಮಾಡಿಲ್ಲ ಎಲ್ಲರೂ ನಮ್ಮ ಸಿನಿಮಾ ಅಂತ ಕೆಲಸ ಮಾಡಿದರು. ಈ ವೇಳೆ ಸಾಕಷ್ಟು ತೊಂದರೆಗಳನ್ನ ಎದುರಿಸಿದ್ದೇವೆ. ಈ ಸಿನಿಮಾದ ಈ ಹಂತಕ್ಕೆ ತಂದಿದ್ದೆ ಕನ್ನಡಿಗರು. ಕನ್ನಡಿಗರಿಂದ ಈ ಮೂವಿ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗ್ತದೆ. ಬಹುತೇಕ ಕನ್ನಡ ಕಲಾವಿದರೆ ಸಿನಿಮಾದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

WhatsApp Group Join Now

ಕಾಂತಾರ ಸಿನಿಮಾದಲ್ಲಿ ಮುಳುಗಿ ಹೋಗಿದ್ದರಿಂದ ಹೊರಗಡೆ ಏನಾಗ್ತದೆ ಎನ್ನುವುದು ನನ್ನ ಗಮನಕ್ಕೆ ಇಲ್ಲ. ಸಿನಿಮಾದ ಕಥೆ ಚೆನ್ನಾಗಿದ್ದರೆ ಇಂಡಸ್ಟ್ರಿ ಚೆನ್ನಾಗಿರುತ್ತದೆ. ಅಭಿಮಾನಿಗಳಲ್ಲಿ ಸಿನಿಮಾದ ಅಭಿರುಚಿಗಳು ಬದಲಾವಣೆ ಆದಾಗ ಸಿನಿಮಾದವರು ಅವುಗಳನ್ನ ನೀಗಿಸಬೇಕು, ಆಗ ಸಕ್ಸಸ್ ಸಿಗುತ್ತದೆ. ಅಮೇರಿಕಾದಲ್ಲಿ ಕಾಂತಾರ ಕನ್ನಡದಲ್ಲಿ ರಿಲೀಸ್ ಆಗ್ತದೆ. ಜೊತೆಗೆ ಎಲ್ಲಾ ಭಾಷೆಗಳಲ್ಲೂ ಇರುತ್ತೆ ಎಂದು ಹೇಳಿದ್ದಾರೆ. ಕಾಂತಾರ ಫ್ರೀಕ್ವೆಲ್ ಮಾಡಬೇಕಾದರೆ ಸಾಕಷ್ಟು ಕಷ್ಟಗಳನ್ನ ದಾಟಿ ಸಿನಿಮಾ ಮುಗಿಸಿದ್ದೇವೆ.

ಇದರ ಮಧ್ಯೆ ಪ್ರಗತಿ ಅವರು ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತಿದ್ರು. ಎಲ್ಲರೂ ಹೇಳ್ತಿದ್ರು ನನ್ನಿಂದ ಅಂತ, ಅದು ನನ್ನಿಂದ ಆಗಿದ್ದಲ್ಲ ನನ್ನ ಹೆಂಡತಿ, ನನ್ನ ರೈಟರ್ ಟೀಮ್ ಮನೆ ಬಿಟ್ಟು ನನ್ನ ಜೊತೆಗೆ ಶ್ರಮ-ಶ್ರದ್ಧೆ ಹಾಕಿದ್ದರಿಂದ ದೊಡ್ಡ ಪ್ರಾಜೆಕ್ಟ್ ಮಾಡಿ ಮುಗಿಸುವಲ್ಲಿ ಯಶಸ್ವಿಯಾದೆವು ಎಂದು ರಿಷಬ್ ಶೆಟ್ಟಿ ಹೇಳ್ಕೊಂಡಿದ್ದಾರೆ.

WhatsApp Group Join Now

Spread the love

Leave a Reply